ಮಕರಂದ/ದೋಣಿ

ಹೀಗೊಂದು ಹರೆಯ!

'ನೆರಿಗೆ ತೀಡಿದಷ್ಟು ಸುಕ್ಕು, ಹಟ ಮಾಡುವ ಕೂದಲು'
ಈ ಸಾಲು ನೆನಪಾಯಿತವಳಿಗೆ. ಮುಂಗುರುಳನ್ನು ಮತ್ತೊಮ್ಮೆ ಬಾಚಿ ನಗುತ್ತಾ ಮೊಬೈಲ್‌ನಲ್ಲಿ ಟೈಮ್ ನೋಡಿ ಕಾಲೇಜು ಬಸ್ಸು ಹಿಡಿಯಲು ಕಾಲು ಹೆಜ್ಜೆ ಹಾಕಿತು. ಮುಂಜಾವಿನ ಮಸುಕನ್ನು ಕಲಕುತ್ತ ಬರುವ ಆ ಹಳದಿ ಬಸ್ ಅವಳಿಗೆ ಇಷ್ಟ.
ಗಡಿಬಿಡಿಯಿಂದ ಕೆಲಸಕ್ಕೆ ಬರುತ್ತಿದ್ದ, ದಿನವೂ ಒಂದೇ ರೀತಿಯೆನಿಸುವ ಆ ಊರು, ಕಣ್ಣ ಮುಂದೆ ಬಸ್ಸಿನ ಕಿಟಕಿಯಾಚೆ ಓಡುತ್ತಿತ್ತು. ಕುತೂಹಲದಿಂದ ನೋಡುತ್ತಿದ್ದ ಅವಳ ಕಣ್ಣುಗಳಿಗೆ ಆ ಚಿತ್ರ ಒಂದು ಪರೀಕ್ಷೆಯ ಪೇಪರ್‌ನಂತೆ ಭೀತಿ ಹುಟ್ಟು ಹಾಕುತ್ತಿತ್ತು. ಇನ್ನೊಂದು ವರ್ಷ ಕಳೆದರೆ ಈ ಕಂಫರ್ಟ್ ಜೋನ್‌ನಿಂದ ಆ ಸಾಧನ ಕೇರಿಗೆ ಇಳಿಯುತ್ತೇನೆ ಅಂದುಕೊಂಡಳು.
ಮೊನ್ನೆಯಷ್ಟೇ ಕೇಳಿದ ಭಾಷಣ ಇನ್ನೂ ಕಿವಿಯಲ್ಲಿತ್ತು. ಮುಂದೆ ನಾನು ಏನು ಮಾಡಬೇಕು? ಹೇಗೆ ಬದುಕಬೇಕು? ರಾಜಕಾರಣದಲ್ಲಿ ಆಸಕ್ತಿ ತೋರಿಸಬಹುದಾ? ತನ್ನ ಪಾಡಿಗೆ ಸಾಫ್ಟ್‌ವೇರ್ ಎಂಬ ಬುರ್ಖಾ ಧರಿಸಿ ಪರದೇಶಕ್ಕಾಗಿ ದುಡಿಯುವುದಾ? ಸುಮ್ಮನೆ ಮುಂದಿನ ಪ್ರಜೆಗಳಾದ ಮಕ್ಕಳ ಮೇಲೆ ಭವಿಷ್ಯ ಹೊರಿಸಿ ಮದುವೆಯಾಗಿ ಬಿಡೋದಾ? ನಾನು ಏನು ಮಾಡಿದರೆ ಹುಟ್ಟಿದ ಈ ನಾಡಿಗೆ ಸ್ವಲ್ಪವಾದರೂ ಉಪಯೋಗವಾಗುತ್ತದೆ? ಅಥವಾ ಭಾರವಾಗುವುದಿಲ್ಲ?
ಪ್ರಶ್ನಾರ್ಥಕವೂ ಪೂರ್ಣ ವಿರಾಮವಾಗುವಂತೆ ಬದಲಿಸಿದ್ದು ಚಿರಪರಿಚಿತವಾದ ಕಾಲೇಜು ಕಟ್ಟಡ. ಸುಮ್ಮನೆ ನಾಜೂಕಾಗಿ ಕ್ಲಾಸಿನ ಗದ್ದಲದಲ್ಲಿ ಮುಳುಗಿದಾಗ ಮತ್ತೆ ಶುರುವಾಯಿತು ಹಿಂದಿನ ದಿನದ ಪಾಠ.
ಮೌನವೇ ಕರ್ಕಶ ಶಬ್ಧವಾಗಿ ಉಸಿರಾಟವೇ ಬಿಗಿಯಾಗಲು ಕಣ್ಣಿವೆಗಳನ್ನು ಚೂರು ಕದಲಿಸಿದಳು. ಗೋಡೆಗೆ ಎಡೆಬಿಡದೆ ಮಾತು ಕಲಿಸುತ್ತಿರುವ ಲೆಕ್ಚರರ್ ಕಾಣಿಸಿದರು. ಸ್ವಲ್ಪ ಕಿವಿಗೊಟ್ಟು ಕೇಳಲು ಪಠ್ಯಪುಸ್ತಕವನ್ನು ಓದುತ್ತಿರುವುದು ಅರ್ಥವಾಯಿತು. ಇನ್ನು ಇದಕ್ಕಿಂತ ಜಾಸ್ತಿ ಅರ್ಥವಾಗುವುದಿಲ್ಲ ಎನಿಸಿದಾಗ ನಾಲ್ಕು ಗೋಡೆಗಳ ಮಧ್ಯೆ ಚಲನೆಯಲ್ಲಿದ್ದ ಒಂದು ವಸ್ತುವಿನ ಕಡೆಗೆ ಕಣ್ಣು ಹಾಯಿಸಿದಳು. ಅದು ಪಕ್ಕದ ಸಾಲಿನ ಹುಡುಗ ತಿರುಗಿಸುತ್ತಿದ್ದ ಪೆನ್ನು. ಅವನು ಕುಳಿತ ಶೈಲಿ ಇನ್ನೂ ಆಕರ್ಷಕವಾಗಿ ಕಾಣಿಸಿದ್ದರಿಂದ ಏಕರಾಗದಲ್ಲಿ ಹರಿಯುತ್ತಿದ್ದ ಪಂಡಿತರ ಪಾಠ ಕಿವಿಗೆ ತಲುಪದಾಯಿತು.
ನ್ಯೂಟನ್ನಿನ ಮೂರನೇ ನಿಯಮದನ್ವಯ ಅವನ ಕಣ್ಣು ಅವಳ ಕಣ್ಣುಗಳಲ್ಲಿ ಆಕರ್ಷಿತವಾಯಿತು. ಜಗತ್ತು ಮರೆಯಲು ಇಷ್ಟು ಸಾಕು. ಈ ಕಾರಣದಿಂದ ಅವಳಲ್ಲಿ ಪ್ರೀತಿಯ ಮಿಂಚೇ ಪ್ರವಹಿಸಿತು ಎಂದು ಹೇಳುವುದಿಲ್ಲ; ದಿನದ ಕಾಲಹರಣವಂತೂ ಸುಲಭವಾಯಿತು. ಏನೂ ಇಲ್ಲದೆ ಶಾಂತವಾಗಿ, ಖಾಲಿಯಾಗಿದ್ದ ಮನಸ್ಸಿಗೆ ಏನೋ ತುಂಬಿಕೊಂಡಿತು.

- ಮನುಶ್ರೀ ಕೆ.ಎಸ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!