2014ನೇ ಸಾಲಿನ ಕನ್ನಡ ಟೊಟೊ ಪುರಸ್ಕಾರಕ್ಕಾಗಿ ಟಿಎಫ್ಎ (ಖ್ಟಿಡ್ಟಿ ಋ್ಡಟಿಜಡ ಝಿಜ ಆ್ಠಡಿಡ) ಸಂಸ್ಥೆಯು ಸೃಜನಶೀಲ ಯುವ ಬರಹಗಾರರಿಂದ ಪ್ರವೇಶಗಳನ್ನು ಆಹ್ವಾನಿಸಿದೆ. ಪುರಸ್ಕಾರಕ್ಕಾಗಿ ಬರಹಗಳನ್ನು ಕಳುಹಿಸುವವರು 18- 29 ವಯಸ್ಸಿನವರಾಗಿರಬೇಕು. ಜನವರಿ 1, 1984ರ ನಂತರ ಹುಟ್ಟಿದವರು ಮಾತ್ರ ಈ ಪುರಸ್ಕಾರಕ್ಕೆ ಪ್ರವೇಶಗಳನ್ನು ಕಳಿಸಲು ಅರ್ಹರು. ಕಥೆ, ಕವಿತೆ ಮತ್ತು ನಾಟಕ ಈ ಮೂರರಲ್ಲಿ ಯಾವುದೇ ಪ್ರಕಾರದ ಕನ್ನಡ ರಚನೆಗಳನ್ನು ಕಳುಹಿಸಬಹುದು. ಪುರಸ್ಕಾರದ ಆಯ್ಕೆಯನ್ನು ಕನ್ನಡದ ಹಿರಿಯ ಬರಹಗಾರರ ಸಮಿತಿಯು ಮಾಡಲಿದೆ. ಪ್ರವೇಶ ಕಳುಹಿಸಲು ಕೊನೆಯ ದಿನ: ಸೆಪ್ಟೆಂಬರ್ 15, 2013.
ಪ್ರಶಸ್ತಿಯ ಮೊತ್ತ: 30,000 ರು.
ವಿಳಾಸ: ಟೊಟೊ ಫಂಡ್ಸ್ ದಿ ಆರ್ಟ್ಸ್, ಎಚ್ 301, ಆದರ್ಶ ಗಾರ್ಡನ್ಸ್, 8ನೇ ಬ್ಲಾಕ್, 47ನೇ ಕ್ರಾಸ್, ಜಯನಗರ, ಬೆಂಗಳೂರು- 560 082.
ಟೊಟೊ ವಾರ್ಷಿಕ ಪ್ರಶಸ್ತಿಗಳನ್ನು ಛಾಯಾಚಿತ್ರ, ಸಂಗೀತ ಮತ್ತು ಸಾಹಿತ್ಯ ಕ್ಷೇತ್ರಗಳಿಗೆ ನೀಡಲಾಗುತ್ತದೆ. ಈ ಬಗ್ಗೆಢ ಹೆಚ್ಚಿನ ಮಾಹಿತಿಗೆ http://totofundsthearts.blogspot.com ಜಾಲತಾಣಕ್ಕೆ ಭೇಟಿ ನೀಡಬಹುದು.