ಮನದಿ ಮೂಡಿದ ಚಿತ್ರ
ನಗುತ್ತಿದ್ದವಳ ಮೈಮೇಲೆ
ಬಿದ್ದ ಬಾಸುಂಡೆಗಳು
ಮಾಡದ ತಪ್ಪನು
ಮರೆಮಾಚಿ ನಗುತ್ತಿವೆ.
=
ಅಂದು ಸಾಗಿದ
ಹಸಿರಿನ ಹಾದಿ
ಇಂದು
ಸಿಮೆಂಟಿನ ಬೀದಿ
=
ಮಳೆರಾಯನ ಆರ್ಭಟದಲಿ
ಮಿಂದೆದ್ದ ಜೀವ
ಸುಡು ಬಿಸಿಲಿಗೆ ಮೈಯೊಡ್ಡಿದೆ.
ತೊಯ್ದ ದೇಹ-ಮನಸ್ಸನ್ನು
ಬೆಚ್ಚಗಿರಿಸಲು
ನಿದ್ರೆಯ ಮಂಪರಿನಲಿ.
=
ಮನಸ್ಸಿನೊಳಗೆ
ಮೂಡುತ್ತಿರುವ ಚಿತ್ರ
ಕನಸಿನ ಹಾದಿಯ ತೋರುತ್ತಿದೆ.
=
ಜೀರುಂಡೆಯ
ಹೊಳಪಿನ ಮೈ ಕಂಡ
ಎಲೆಯ ಕೆನ್ನೆ
ಕೆಂಪೇರಿದೆ.
=
ಎಲ್ಲರೂ ಇರೋದೆ ಹೀಗೆ
ನೀನಲ್ಲದ ಹಾಗೆ
=
ಮನದಿ ಮೂಡಿದ ಚಿತ್ರ
ಕಣ್ಣು ಕುಕ್ಕುತ್ತಿದೆ
ಹೊರಗೆ ಬರಲು
-ಕಾವೇರಿ ಎಸ್.ಎಸ್.