ಊಟ ಬೇಕೋ ಅಥವಾ ರೊಟ್ಟಿ ಸಾಕೋ?
ಕನ್ನಡದ ಮಹತ್ವದ ಕವಿಗಳಲ್ಲಿ ಎಸ್.ವಿ. ಪರಮೇಶ್ವರ ಭಟ್ಟ ಅವರೂ ಒಬ್ಬರು. ಕಾಲೇಜು ಅಧ್ಯಾಪಕರಾಗಿದ್ದ ಭಟ್ಟರದು ಗಂಭೀರ ಹಾಸ್ಯ ಪ್ರವೃತ್ತಿ...
ಕನ್ನಡದ ಮಹತ್ವದ ಕವಿಗಳಲ್ಲಿ ಎಸ್.ವಿ. ಪರಮೇಶ್ವರ ಭಟ್ಟ ಅವರೂ ಒಬ್ಬರು. ಕಾಲೇಜು ಅಧ್ಯಾಪಕರಾಗಿದ್ದ ಭಟ್ಟರದು ಗಂಭೀರ ಹಾಸ್ಯ ಪ್ರವೃತ್ತಿ. ಅದೊಮ್ಮೆ ಅವರು, ಕನ್ನಡ ಅನುವಾದದ ಸಮೇತ, ಸಂಸ್ಕೃತ ಶ್ಲೋಕಗಳನ್ನು ವಿವರಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳಿಗೆ ಕೇಳಿದ ಪ್ರಶ್ನೆ ಇದು; 'ನೀವು ಸಂಸ್ಕೃತ ಶ್ಲೋಕಗಳನ್ನು ಬರೆದುಕೊಳ್ಳುತ್ತೀರೋ ಅಥವಾ ನಿಮಗೆ ಕನ್ನಡ ಅನುವಾದದ ವಿವರಣೆ ಮಾತ್ರ ಸಾಕೋ?'
ವಿದ್ಯಾರ್ಥಿಗಳಿಂದ ತಕ್ಷಣವೇ, 'ಕನ್ನಡ ಅನುವಾದವೇ ಸಾಕು ಸಾರ್' ಎಂಬ ಉತ್ತರ ಬಂತು. ಸಂಸ್ಕೃತದ ಕನ್ನಡ ಅನುವಾದ ತಿಳಿದರೆ ಸಾಕು. ಶ್ಲೋಕ ಬರೆದುಕೊಂಡು ಅದನ್ನು ಕಷ್ಟಪಟ್ಟು ಓದಿ, ಅಗತ್ಯ ಬಿದ್ದರೆ ಬಾಯಿಪಾಠ ಮಾಡಿಕೊಳ್ಳುವ ರಗಳೆಯೆಲ್ಲಾ ಯಾರಿಗೆ ಬೇಕು ಎಂಬುದು ವಿದ್ಯಾರ್ಥಿಗಳ ಇಂಗಿತವಾಗಿತ್ತು.
ಇದನ್ನು ಅರ್ಥಮಾಡಿಕೊಂಡ ಪ್ರೊಫೆಸರ್ ಪರಮೇಶ್ವರ ಭಟ್ಟರು, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು "ಒಂದು ಊರಿನಲ್ಲಿ ಅಜ್ಜಿ-ಮೊಮ್ಮಗ ಇದ್ರು. ಅದೊಂದು ದಿನ ಮೊಮ್ಮಗನನ್ನು ಅಜ್ಜಿ ಕೇಳಿದಳು 'ಮಗಾ, ನೀನು ತಂಗಳು ಊಟ ಮಾಡ್ತೀಯಾ, ರೊಟ್ಟಿ ತಿಂತೀಯಾ ಅಥವಾ ಬಿಸಿ ಅನ್ನ ಮಾಡ್ತೇನೆ ಅದನ್ನು ತಿಂತೀಯೊ ?'ಈ ಪ್ರಶ್ನೆಗೆ ಮೊಮ್ಮಗ ಉತ್ತರಿಸಿದ್ದು ಹೀಗೆ 'ಅಜ್ಜೀ, ನಾನು ತಂಗಳು ಊಟ ಮಾಡಿ, ಬಿಸಿ ಅನ್ನ ಆಗುವವರೆಗೆ ರೊಟ್ಟಿ ತಿನ್ನುತ್ತಾ ಇರ್ತೇನೆ !'
ಇಷ್ಟು ಹೇಳಿ, ಕೆಲಕ್ಷಣ ಮಾತು ನಿಲ್ಲಿಸಿದ ಪರಮೇಶ್ವರ ಭಟ್ಟರು, ನಂತರ ವಿದ್ಯಾರ್ಥಿಗಳಿಗೆ ಹೇಳಿದರಂತೆ. "ಈಗ ಹೇಳಿದ ಕತೆಯಲ್ಲಿ ಬಂದ ಮೊಮ್ಮಗನ ಯೋಚನೆಯಂತೆಯೇ ನೀವೂ ಯೋಚಿಸಬೇಕು. ಅಗತ್ಯವಿದ್ದಷ್ಟು, ಅಥವಾ ಪರೀಕ್ಷೆಯಲ್ಲಿ ಅಂಕ ಪಡೆಯಲು ಎಷ್ಟು ಬೇಕೋ ಅಷ್ಟನ್ನು ತಿಳಿದುಕೊಂಡರೆ ಸಾಕು ಎಂಬ ಮನೋಭಾವ ಖಂಡಿತ ಸಲ್ಲದು".
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.