ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮಕರಂದ/ದೋಣಿ

ನಗಬೇಕು

Rashmi Kasaragodu
Updated On : 10 Dec 2013, 3:21 am

ನಿರ್ದೇಶಕ: ನೀವು 10ನೇ ಮಹಡಿಯಿಂದ ಈಜುಕೊಳಕ್ಕೆ ಧುಮುಕಬೇಕು.
ನಟ: ಆದರೆ ನನಗೆ ಈಜು ಬರುವುದಿಲ್ಲ?
ನಿರ್ದೇಶಕ: ಯೋಚಿಸಬೇಡಿ. ಈಜುಕೊಳದಲ್ಲಿ ನೀರು ಇರುವುದಿಲ್ಲ!
=====
ಶರಾಬು ಈ ದೇಶದ ಜನರನ್ನು ನಿರ್ಗತಿಕರನ್ನಾಗಿ ಮಾಡುತ್ತಿರುವ ರಾಕ್ಷಸ.
ಬನ್ನಿ. ಎಲ್ಲರೂ ಸೇರಿ ಒಂದೊಂದು ಬಾಟಲಿ ಕುಡಿದು ಎಲ್ಲವನ್ನೂ ಖಾಲಿ ಮಾಡೋಣ!
=====
ಗಂಡ ಕುಡಿದ ಅಮಲಿನಲ್ಲಿ ಹೆಂಡತಿಯ ಹತ್ತಿರ ಬಂದು ಹೇಳಿದ.
'ಲೇ, ಇವತ್ತು ಒಂದು ಭಾರಿ ವಾಹನ ನನ್ನ ಮೇಲೆ ಹರಿದ್ರೂ ನಾನು ಸಾಯಲಿಲ್ಲ ಕಣೆ.' 'ಇದು ವಿಚಿತ್ರಾನೇ. ಅದಿರಲಿ, ನಿಮ್ಮ ಮೇಲೆ ಹಾಯ್ದುಹೋದ ವಾಹನವಾದರೂ ಯಾವುದು?' ಹೆಂಡತಿ ಕೇಳಿದಳು.
'ಏರೋಪ್ಲೇನ್ ಕಣೇ!'
=====
ಗುಂಡನ ಮಡದಿ ಆತ್ಮಹತ್ಯೆ ಮಾಡಿಕೊಳ್ಳೋಕೆ ನಿರ್ಧರಿಸುತ್ತಾಳೆ. ಅದಕ್ಕಿಂತ ಮುಂಚೆ ಸರಿಯಾಗಿ ಮೇಕಪ್ ಮಾಡಿಕೊಳ್ಳುತ್ತಾಳೆ.
ಆಕೆಯ ಸ್ನೇಹಿತೆ: ಸಾಯೋ ಸಮಯದಲ್ಲಿ ನಿನಗ್ಯಾಕೆ ಕಣೇ ಈ ಮೇಕಪ್?
ಗುಂಡಿ: ಯಾಕೆಂದ್ರೆ, ಸತ್ತ ಮೇಲೆ ಟಿವಿ9 ನವರು ಬರ್ತಾರಲ್ಲಾ, ಆಗ ನನ್ನ ಮುಖ ಚೆನ್ನಾಗಿ ಕಾಣಿಸಬೇಕಲ್ವಾ?
=====
ಅಜ್ಜ ಅಜ್ಜಿ ಬಹಳ ಸಮಯದ ನಂತರ ಊಟ ಮಾಡಲು ರೆಸ್ಟೋರೆಂಟ್ಗೆ ಹೋಗುತ್ತಾರೆ. ಇವರು ಆರ್ಡರ್ ಮಾಡಿದ ತಿಂಡಿಯನ್ನು ಮಾಣಿ ತಂದಿಡುತ್ತಾನೆ.
ಮಾಣಿ: ಅಜ್ಜಿ, ತಿಂಡಿ ತೆಗೆದುಕೊಂಡು ಬಂದಿದ್ದೀನಿ, ತಿನ್ನಿ.
ಅಜ್ಜಿ: ಇರಪ್ಪಾ... ಅವ್ರು ಮೊದ್ಲು ತಿನ್ಲಿ...
ವೈಟರ್: ಆಹಾ... ಗಂಡ ಅಂದ್ರೆ ಎಷ್ಟು ಪ್ರೀತಿ ನಿನಗೆ.
ಅಜ್ಜಿ: ಹೋಗಯ್ಯ... ಪ್ರೀತೀನು ಇಲ್ಲಾ... ಕರ್ಮಾನು ಇಲ್ಲ. ನಮ್ಮಿಬ್ಬರ ಬಳಿ ಇರೋದು ಒಂದೇ ಹಲ್ಲಿನ ಸೆಟ್?
=====
ಅವಳು: ಇದೇನೆ? ನೀನು ದಿನಾ ಟಿ.ವಿಯಲ್ಲಿ ಕ್ವಿಜ್ ನಡೆಸಿಕೊಡ್ತೀಯ. ಅಲ್ಲಿ ಯಾರೇ ತಪ್ಪು ಉತ್ತರ ಹೇಳಿದ್ರೂ ಛಕ್ ಅಂತ ಸರಿ ಉತ್ತರ ಹೇಳ್ತೀಯ. ಆದ್ರೆ ಇಲ್ಲಿ ನಾನು ಸಿಂಪಲ್ ಪ್ರಶ್ನೆ ಕೇಳಿದ್ರೂ ಒದ್ದಾಡ್ತೀಯ?
ಇವಳು: ಅಲ್ಲಾದ್ರೆ ಉತ್ತರಗಳನ್ನು ಇನ್ನೊಂದು ಹಾಳೇಲಿ ಬರೆದು ನಮಗೇ ಕೊಟ್ಟಿರ್ತಾರೆ. ಅದನ್ನ ನೋಡ್ಕೊಂಡು ಹೇಳಬಹುದು. ಆದ್ರೆ ಇಲ್ಲಿ...

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments