ಬುದ್ಧ ಹೇಳಿದ್ದು...
ಮನಸ್ಸನ್ನು ಸಂಯಮದಿಂದ ಇಟ್ಟುಕೊಂಡಾಗ ಮಾತ್ರ ನೆಮ್ಮದಿ ಮತ್ತು ಸಂತೋಷ ನಮ್ಮದಾಗುತ್ತದೆ. ಬುದ್ಧಿವಂತನಾದವನು ತನ್ನ ಮನಸ್ಸಿನ ಮೇಲೆ, ಬಯಕೆಗಳ ಮೇಲೆ ಸದಾ ಕಣ್ಣಿಟ್ಟಿರುತ್ತಾನೆ. ಬಯಕೆಗಳನ್ನು ಗುರುತಿಸುವುದು ಕಷ್ಟ. ಅವು ಕಂಡ ಕಂಡತ್ತ ಓಡಲು ಸದಾ ಹಾತೊರೆಯುತ್ತಿರುತ್ತವೆ. ಇಂಥ ಬಯಕೆಗಳನ್ನು ಮೆಟ್ಟಿ ನಿಲ್ಲುವವನು, ಅವುಗಳಿಗೆ ಕಡಿವಾಣ ಹಾಕಿ ಸದಾ ನಿಯಂತ್ರಣದಲ್ಲಿ ಇಟ್ಟುಕೊಳ್ಳುವವನು ಯಾವುದೇ ಸೀಮೆಯಲ್ಲಿದ್ದರೂ ದೊಡ್ಡ ಹೆಸರು ಪಡೆಯುತ್ತಾನೆ. ಒಂದು ತಲೆಮಾರಿಗೆ ಆದರ್ಶಪ್ರಾಯನಾಗುತ್ತಾನೆ.