ಹನಿ ಹನಿ
ಒಮ್ಮೊಮ್ಮೆ ನನ್ನನ್ನು
ನನ್ನಿಂದ ಕಳೆದರೆ
ಉತ್ತರ ಏನೆಂದು ತಾಳೆ ಹಾಕುತ್ತೇನೆ
ಉತ್ತರದಲ್ಲಿ ನೀನೇ.
ಶೂನ್ಯವೆಂಬುದು ಸುಳ್ಳೇ!
ನಿನಗೆ ಅವಮಾನವಾದಾಗ
ಒಮ್ಮೆಯೂ ಚಕಾರವೆತ್ತದೇ.
ಯಾರಿಗೋ ಆದ
ಅವಮಾನಕ್ಕೆ ನೊಂದು
ಕಣ್ಣೀರು ಹಾಕಿದಾಗ
ತಿಳಿಯಿತು... ನಿನ್ನದೆ ಸಾಗರವೆಂದು!
ನೀನು ನನ್ನಂತೆ
ಬದುಕಬೇಕೆಂಬ ನನ್ನ ಅಹಂಕಾರಕ್ಕೆ
ನೀ ಕೊಟ್ಟ ಉತ್ತರ- ಪ್ರೀತಿ.
ಈಗ ನಾನು ನನ್ನಂತೆ
ಬದುಕಲು ಕಲಿತಿದ್ದೇನೆ!
- ಪರೇಶ ಸರಾಫ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.