ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮಕರಂದ/ದೋಣಿ

ವೈದ್ಯಕೃತಿಗೇ ಮದ್ದಿಲ್ಲ!

ದುಃಖಕ್ಕೆ ಕಾರಣವಾದ ವಿಕಾರಗಳನ್ನು ಸೃಷ್ಟಿಸುವುದೇ ರೋಗ. ವಾತ- ಪಿತ್ತ- ಶ್ಲೇಷ್ಮಗಳು ಏರುಪೇರಾದಾಗ ರೋಗ ಕಾಣಿಸಿಕೊಳ್ಳುತ್ತದೆ...

Mainashree
Updated On : 16 Dec 2013, 12:32 pm

ಅಮಯೋನಾವು ಶೋಕಕರ್ತರೀಸ್ಯಾತ್
ಕಾಯಜವಿಕಾ ರಜನಿತ ವಾತಪಿತ್ತಕ್ಲೇಷ್ಮ ವೈಷಮ್ಯಂ
ತತ್ಸಮಾನಾರೋಗ್ಯಂ ತದುಕ್ತಮಭಿತೈಹಿ-
ಅಮಯಸ್ತುಗುಣೇತರ ವೈಚಿತ್ರ್ಯಂ
ದೋಷಸಾಮ್ಯತಾ ಅರೋಗತಾ
ಚಿಕಿತ್ಸಾ ಇತಿಗದಪ್ರತಿಕ್ರಿಯಾ
ಹಿತಕಾರಿಣಿ ಭೂತಾದಾಮಯನಿವರ್ತಕೋಪಾಯೂನ್
ರುಗಾರೋಗ್ಯ ನಿಧಾನಲಕ್ಷಣಾನಿಚ ಪ್ರತಿಪಾದ ಯತ್ತ ಧನುಸಾರೇಣ ಲೋಕಮನುಶಾಸ್ತೀತಿಕಾಸ್ತ್ರಂ


ದುಃಖಕ್ಕೆ ಕಾರಣವಾದ ವಿಕಾರಗಳನ್ನು ಸೃಷ್ಟಿಸುವುದೇ ರೋಗ. ವಾತ- ಪಿತ್ತ- ಶ್ಲೇಷ್ಮಗಳು ಏರುಪೇರಾದಾಗ ರೋಗ ಕಾಣಿಸಿಕೊಳ್ಳುತ್ತದೆ. ಇವು ಸಮಗತಿಯಲ್ಲಿದ್ದರೆ ಆರೋಗ್ಯ. ಶರೀರದ ತಳಮಳಗಳನ್ನೆಲ್ಲ ಹಲವು ವೈದ್ಯಶಾಸ್ತ್ರ ಗ್ರಂಥಗಳು ಬಿಡಿಸಿಟ್ಟಿವೆ. ಅವಕ್ಕೆ ಸೂಕ್ತ ಪರಿಹಾರಗಳನ್ನೂ ಹೇಳಿವೆ. ಆ ನಿಟ್ಟಿನಲ್ಲಿ 'ವೈದ್ಯ ತತ್ವ ನಿರ್ಣಯ ಸಾಗರ' ಕೃತಿಯೂ ಒಂದು ಅಪರೂಪದ ಕಾಣಿಕೆ.
ಈ ಕೃತಿಯ ಕಥೆ ಶತಮಾನದಷ್ಟು ಹಿಂದಿನದ್ದು. ಇದರ ಕರ್ತೃ ಗಣೇಶ ಶಾಂತಯ್ಯ ಕಾರೇಬೈಲಕರ್. 1907ರಲ್ಲಿ ಲೋಕಾರ್ಪಣೆಗೊಳಿಸಿದರು.

ಅಂದಿನ ಬೆಲೆ ಆರು ರು.!
ಬೆಳಗಾವಿ    ಯಲ್ಲಿ ಅಂಬಾಜಿ ರಾಮಚಂದ್ರ ಸಾವಂತ 'ಶ್ರೀರಾಮತತ್ವ ಪ್ರಕಾಶ' ಮುದ್ರಣಾಲಯದಲ್ಲಿ ಇದನ್ನು ಅಚ್ಚು ಹಾಕಿಸಿದರು. 616 ಪುಟಗಳ ಸಂಗ್ರಾಹ್ಯ ಗ್ರಂಥವಿದು. ಅಂದಿನ ಬೆಲೆಯೇ ರು. 6. ಆದರೆ, ಈಗಿದು ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಶ್ಲೋಕಗಳು ಹಾಗೂ ಅದರ ಅರ್ಥ, ಸಂಸ್ಕೃತದಲ್ಲಿ ಆಯುರ್ವೇದ ಔಷಧಿಗಳ ಕುರಿತಂತೆ ಸಮಗ್ರ ಮಾಹಿತಿ ಇದರೊಳಗಿದೆ. ಚರಕ ಸಂಹಿತೆ, ವಾಗ್ಭಟವೆಂಬ ಅಷ್ಟಾಂಗ ಹೃದಯ ಶಾರ್ಥಿಧರ ಸಂಹಿತ, ಅಗಸ್ತ್ಯತಂತ್ರ, ವೈದ್ಯಚಿಂತಾಮಣಿ, ಚಿಕಿತ್ಸಾ ಸಾರ, ಸೌರತಂತ್ರ, ಭೇಷಜಕಲ್ಪ, ಶುಶ್ರುತಾಯ, ವೈದ್ಯಕಲ್ಪತರು, ಶೀರೋಪದೇಶ ಸೂತ್ರ, ರಸೇಂದ್ರ ಚಿಂತಾಮಣಿ, ರಸರತ್ನಾಕರ, ರಸಾರ್ಣವ- ಮುಂತಾದ ಪ್ರಾಚೀನ ಗ್ರಂಥಗಳ ಆಧಾರದಲ್ಲಿ ಇದನ್ನು ರಚಿಸಲಾಗಿದೆ.
ಹಲವು ಔಷಧಗಳ ತಯಾರಿಕಾ ವಿಧಾನಗಳನ್ನು ಇಲ್ಲಿ ಹೇಳಲಾಗಿದೆ. !ನೇ ಪ್ರಕಾರದಲ್ಲೇ 206 ರೋಗ ಮತ್ತು ಅದರ ಚಿಕಿತ್ಸಕ ವಿಧಾನಗಳನ್ನು ತಿಳಿಸಲಾಗಿದೆ. 2ನೇ ಪ್ರಕಾರದಲ್ಲಿ ರೋಗೋತ್ಪತ್ತಿ, ಜ್ವರೋತ್ಪತ್ತಿ, ಜ್ವರಸ್ವರೂಪ, ವಾತ, ಪಿತ್ತ, ವಾತ-ಪಿತ್ತ-ಜ್ವರಗಳ ಕುರಿತ ಉಲ್ಲೇಖವಿದೆ. ಮನುಷ್ಯನ ಸಕಲ ಸಮಸ್ಯೆಗಳಿಗೂ ಪರಿಹಾರ ಹೇಳಲಾಗಿದೆ.

ರಕ್ಷಣೆಗೆ ಮುಂದಾಗಲಿ...
3ನೇ ಪ್ರಕಾರದಲ್ಲಿ ಅತಿಸಾರ ಕುರಿತು ವಿವರವಿದೆ. ವಾತದ ಪ್ರಕಾರ, ಮೂತ್ರದೋಷ, ಅರ್ಬುದ, ರಕ್ತಾರ್ಬುದ, ದಂತರೋಗ ಲಕ್ಷಣ, ಕಂಠದೋಷ, ಕರ್ಣರೋಗ, ನೇತ್ರರೋಗ, ಗರ್ಭಿಣಿ ಚಿಕಿತ್ಸೆ, ಶಿರೋರೋಗ, ಮುಟ್ಟಿನ ತೊಂದರೆ, ಚರ್ಮದ ರೋಗ ಹೀಗೆ ದೇಹದ ಪ್ರತಿ ಅಂಗಾಂಗಗಳಿಗೆ ಸಂಬಂಧಪಟ್ಟ ಮತ್ತು ಕೀಟಾಣುಗಳಿಂದ ಬರಬಹುದಾದ ರೋಗಗಳ ಸಂಪೂರ್ಣ ಮಾಹಿತಿಯನ್ನು 'ವೈದ್ಯತತ್ವ ನಿರ್ಣಯಸಾಗರ' ಕೊಡುತ್ತದೆ.
ಇಷ್ಟು ಅಮೂಲ್ಯ ಗ್ರಂಥ ಬೆಳಕಿಗೆ ಬಾರದಿರುವುದೇ ಅಚ್ಚರಿ. ಇಂಥ ಹಲವು ಗ್ರಂಥಗಳು ಸರ್ಕಾರದ ಕಣ್ಣಿಗೆ ಬೀಳುತ್ತಿಲ್ಲ. ಕಾಲವೂ ಬದಲಾಗಿದೆ. ಕೃತಿಯಲ್ಲಿ ಪ್ರಸ್ತಾಪಿಸಿದ ಹಲವು ಗಿಡಮೂಲಿಕೆಗಳು ಇವತ್ತು ಕಾಣಸಿಗುತ್ತಿಲ್ಲ. ಬಹುಶಃ ಕಣ್ಮರೆಯಾಗುವುದು, ಕಾಲದೊಂದಿಗೆ ಜೀರ್ಣವಾಗುವುದು ಬಹುಶಃ ಸಾಹಿತ್ಯದ ರಕ್ತಗುಣವೋ ಏನೋ?

- ಚಿತ್ರ ಲೇಖನ - ವಿಶ್ವಾಮಿತ್ರ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments