ನೀರಿನ ಬಿಂದಿಗೆಗೆ ಕೋತಿ ಬಾಯಿ ಹಾಕಿತು ಎಂಬ ಕಾರಣಕ್ಕೆ ಅದಕ್ಕೆ ಹೊಡೆದು ಓಡಿಸಿದ ಆಚಾರ್ಯರು ಆ ನೀರನ್ನು ಚೆಲ್ಲಿ ಬೇರೆ ನೀರನ್ನು ತಂದು ಆಂಜನೇಯನ ವಿಗ್ರಹಕ್ಕೆ ಅಭಿಷೇಕ ಮಾಡಲು ಸುರಿದರು.
-
ರಾಘವೇಂದ್ರ ಸ್ವಾಮಿ ಮಠದಲ್ಲಿ ಪ್ರತಿ ಗುರುವಾರದಂತೆ ಈ ವಾರವೂ ವಿಜೃಂಭಣೆಯ ಪೂಜೆ. ಮಂತ್ರಘೋಷ , ಲಾಲಿಹಾಡು, ಮಂಗಳಾರತಿ, ಪ್ರಸಾದ ವಿನಿಯೋಗ ಎಲ್ಲ ಮುಗಿದ ನಂತರ ಮಗುವೊಂದು ಕೇಳಿತು: ' ಲಾಲಿ ಹಾಡಿದ ಮೇಲೆ ಮಂಗಳಾರತಿ ಮಾಡಿದರೆ ಮಲಗಿದ ದೇವರಿಗೆ ತೊಂದರೆಯಾಗುವುದಿಲ್ಲವೆ?'