ಸುಬ್ಬು: ನನ್ನ ಚಿಕ್ಕಪ್ಪ ಇಪ್ಪತ್ತೈದು ವರ್ಷಗಳ ಕಾಲ ಅಮೆರಿಕದಲ್ಲಿ ಜೀವಿಸಿದ ನಂತರ ಭಾರತಕ್ಕೆ ಬಂದರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದು, ಭಾರತದ ನೆಲ ಸ್ಪರ್ಶಿಸುತ್ತಿದ್ದಂತೆ ಸಾಷ್ಟಾಂಗ ಮಲಗಿಬಿಟ್ಟು ಭೂಮಿಯನ್ನು ಚುಂಬಿಸಿದರು.
ಡಿಬ್ಬಿ: ಇನ್ನೇನೋ ಮತ್ತೆ, ಅದು ಅವರಿಗೆ ತಮ್ಮ ಭೂತಾಯಿಯ ಮೇಲಿದ್ದ ಪ್ರೀತಿಯನ್ನು ತೋರಿಸುತ್ತದೆ.
ಸುಬ್ಬು: ಅದು ಹಾಗಲ್ಲ ಮಗನೆ, ವಿಮಾನದಿಂದ ಇಳಿಯುತ್ತಿದ್ದಂತೆ ಬಾಳೆ ಹಣ್ಣಿನ ಸಿಪ್ಪೆಯ ಮೇಲೆ ಕಾಲಿಟ್ಟರು!
=
ಸುಬ್ಬು: ಎಯ್, ನಿನ್ನ ಹೆಂಡತಿಯ ಹುಟ್ಟುಹಬ್ಬದಂದು ಆಕೆಗೆ ವಿಷ್ ಮಾಡಿ, ಆಕೆಯೊಂದಿಗೆ ಕೆಲ ದಿನವಾದರೂ ಸಂತೋಷವಾಗಿರಬೇಕೆಂದು ಜೈಲಿನಿಂದ ತಪ್ಪಿಸಿಕೊಂಡಿದ್ದು ನೀನೇ ಅಲ್ವಾ?
ಡಿಬ್ಬಿ: ಹೌದು ಅದು ನಾನೇ.
ಸುಬ್ಬು: ಹೌಗಿದ್ರೆ ಇಷ್ಟು ಬೇಗನೆ ಹ್ಯಾಗೆ ಮತ್ತೆ ಜೈಲು ಸೇರಿಕೊಂಡೆ?
ಡಿಬ್ಬಿ: ನಾನು ನನ್ನ ಹೆಂಡತಿಗೆ ವಿಶ್ ಮಾಡಿ ಉಡುಗೊರೆ ನೀಡಿದ ಮರುಗಳಿಗೆಯೆ ನನ್ನನ್ನು ಪೊಲೀಸರಿಗೆ ಒಪ್ಪಿಸಿ ಹೆಂಡತಿ ಬಹುಮಾನ ಗಿಟ್ಟಿಸಿದಳು.
=
ಸುಬ್ಬು ಮತ್ತು ಡಿಬ್ಬಿ ಬಿಎಂಟಿಸಿ ಬಸ್ ಹತ್ತಿದ್ದರು. ಸುಬ್ಬು ತನಗಾದ ಅವಮಾನವನ್ನು ಹೇಳಿಕೊಳ್ಳುತ್ತಿದ್ದ.
ಸುಬ್ಬು: ಆ ಕಂಡಕ್ಟರ್‌ಗೆ ಎಷ್ಟು ಧಿಮಾಕು ನೋಡೋ. ನಾನೇನು ಟಿಕೆಟ್ಟೇ ತಗೊಂಡಿಲ್ಲ ಎನ್ನುವ ಹಾಗೆ ಗುರಾಯಿಸುತ್ತಿದ್ದ.
ಡಿಬ್ಬಿ: ಅದಕ್ಕೆ ನೀನೇನು ಮಾಡಿದಿ?
ಸುಬ್ಬು: ಮಾಡೋದೇನು, ನನ್ನ ಬಳಿಯೂ ಟಿಕೆಟ್ ಇರುವವರ ಹಾಗೆ ಅವನನ್ನು ಗುರಾಯಿಸಿದೆ!