ಬಾ ಸಖಿ
ಎದೆಗೆ ಕಿವಿಗೊಟ್ಟು ಕೇಳು
ಏರಿಳಿತದ ಕಾಗುಣಿತ
ನಿನ್ನ ಆಗಮನ-ನಿರ್ಗಮನದಿಂದಲ್ಲ
ಹುಷಾರಿಲ್ಲದ್ದರಿಂದೀ ತಕಧಮಿತ!
=
ಕರುಳು ಕೊರೆವ ಚಳಿಯಲ್ಲೂ
ನಿನ್ನ ನೆನಪು
ಅಂದರೆ
ನೀನಲ್ಲ ಕಣೇ ಅಮ್ಮು;
ಮೈ ಬಿಸಿ ಮಾಡೋ
ಹಾಟ್ ರಮ್ಮು!
ನಾನು ನಿಮ್ಮಂತೆ
ಬಲಹೀನ
ಸೋಲ್ತೀನಿ ಸೊರಗ್ತೀನಿ
ಕೇವಲ... ಪ್ರೀತಿಗೆ!
=
ಬೆಳಕಿಗೆ ಒಂದೇ ಮುಖ
ಕತ್ತಲಿಗೆ?
ಅಗಣಿತ!
=
ಕರುಳ ಒಳಗಿನ ಕೂಗು
ಹಸಿವು, ಹಸಿವು
ಅನ್ನದ್ದಲ್ಲ;
ಅಮ್ಮನದು... ಬೇಗ ನನ್ನ
ಕರೆದು ಕೊ
ಒಳಗೆ ಭಯವಾಗಿದೆ.
= ಸಂತೇಬೆನ್ನೂರು ಫೈಜ್ನಟ್ರಾಜ್