ರೋಗಿ : ವೈದ್ಯರೆ, ನನ್ನ ರೋಗ ಗುಣವಾಗುತ್ತದಾ ?
ಡಾ॥ : ನಿನಗೆ ವಿಚಿತ್ರ ರೋಗವಿದೆ. ಆದರೂ, ನೀನು ಖಂಡಿತ ಬದುಕುಳಿಯುತ್ತೀಯಾ ?
ರೋಗಿ : ವಿಚಿತ್ರವಾದ ರೋಗ ಅಂತೀರಾ, ಅಂದ್ರೆ ಅದ್ಯಾವ ಖಾತ್ರಿಯಿಂದ ಬದುಕುಳಿಯುತ್ತೀ ಎಂದು ಹೇಳ್ತೀರಿ ?
ಡಾ॥ : ನಿನಗಿರುವ ರೋಗದ ಲಕ್ಷಣ ಹೇಗಿದೆಯೆಂದರೆ, ಹತ್ತರಲ್ಲಿ ಒಂಬತ್ತು ರೋಗಿಗಳು ಈ ರೋಗದಿಂದ ಅಸುನೀಗುತ್ತಾರೆ.
ರೋಗಿ : (ಗಡಗಡ ನಡುಗುತ್ತಾ) ಹಾಗಂದ್ರೆ ?
ಡಾ॥ : ಹೆದರಬೇಡ, ನೀನು ಖಂಡಿತ ಬದುಕುತ್ತೀಯಾ ಅಂತ ಹೇಳಿದ್ದು ಯಾಕಂದ್ರೆ, ಈ ರೋಗದ ಚಿಕಿತ್ಸೆಗೆಂದು ನನ್ನ ಬಳಿ ಬಂದ ಒಂಬತ್ತು ರೋಗಿಗಳು ಈಗಾಗಲೇ ಶಿವನ ಪಾದ ಸೇರಿದ್ದಾರೆ !
=
ಗುಂಡ : ನಿನ್ನ ಹೆಂಡತಿಯನ್ನೂ ವಾಕಿಂಗ್ ಕರ್ಕೊಂಡು ಬಾಪ್ಪಾ...
ತಿಮ್ಮ : ಯಾಕಪ್ಪಾ ಈ ತರ ಮಾತಾಡ್ತೀಯಾ ?
ಗುಂಡ : ನಾನು ಏನು ತಪ್ಪು ಮಾತಾಡಿದೆ ಹೇಳು ?
ತಿಮ್ಮ : ಪಾಪಿ, ವಾಕಿಂಗ್ ಬರುವ ಅರ್ಧ ಗಂಟೆ ನನಗೆ ಫ್ರೀ ಸಿಕ್ಕಿದರೂ ನಿನಗೆ ಸಹಿಸಿಕೊಳ್ಳೋಕೆ ಆಗಲ್ವಾ ?
=
ಡಾಕ್ಟರ್ : ಈ ಟಾನಿಕ್ ಅನ್ನು ಬೆಳಿಗ್ಗೆ 2 ಸ್ಪೂನ್, ಮಧ್ಯಾಹ್ನ 2 ಸ್ಪೂನ್, ರಾತ್ರಿ 2 ಸ್ಪೂನ್ ತರ 3 ದಿನ ತಗೋ
ರೋಗಿ : ನಿಮ್ಮ ಟಾನಿಕ್ ನೀವೇ ಇಟ್ಕೊಳ್ಳಿ
ಡಾಕ್ಟರ್ : ಯಾಕಯ್ಯಾ ?
ರೋಗಿ : ಅಲ್ಲಾ ಡಾಕ್ಟರ್... ಮನೇಲಿ ಅಷ್ಟೊಂದು ಸ್ಪೂನ್ ಇಲ್ಲ.
=
ದೇವರ ಬಳಿ ವರ ಕೇಳುವ ಸಲುವಾಗಿ ಗುಂಡ ತಪಸ್ಸು ಮಾಡಲು ನಿರ್ಧರಿಸಿದ. ತಪಸ್ಸಿಗೆ ಕುಳಿತವನ ಮೇಲೆ ಜೋರು ಮಳೆ ಸುರಿಯಿತು. ಗುಡುಗು, ಸಿಡಿಲುಗಳು ಸದ್ದು ಮಾಡಿದವು. ಜೋರಾಗಿ ಬಿರುಗಾಳಿಯೆದ್ದಿತು. ದೇವೇಂದ್ರನ ಕುತಂತ್ರದಿಂದ ರಂಭೆ, ಊರ್ವಶಿ, ಮೇನಕೆಯರು ಭೂಮಿಗೆ ಬಂದು ಗುಂಡನೆದುರು ನರ್ತಿಸಿದರು. ಆದರೆ ಇದ್ಯಾವುದರಿಂದಲೂ ಅವನ ತಪಸ್ಸನ್ನು ಭಂಗಗೊಳಿಸಲು ಆಗಲಿಲ್ಲ!
ಆದರೆ... ಸಂಜೆ ಆಫೀಸ್ ಬಿಟ್ಟ ತಕ್ಷಣ ಮನೆಯಲ್ಲಿರಬೇಕೆಂದು ತನ್ನ ಹೆಂಡತಿ ವಿಧಿಸಿದ್ದ ಎಚ್ಚರಿಕೆಯ ಮಾತು ನೆನಪಾದ ತಕ್ಷಣ, ಗುಂಡ ತಪಸ್ಸು ಬಿಟ್ಟು ಮನೆಯ ಕಡೆಗೆ ಓಡಿದ!!
=
ಗುಂಡ : ಟೈಮ್ ಎಷ್ಟು ?
ಮರಿಗುಂಡ : ನನಗೆ ಟೈಮ್ ನೋಡೋಕೆ ಬರೋಲ್ಲ ಅಪ್ಪಾ
ಗುಂಡ : ದೊಡ್ಡ ಮುಳ್ಳು, ಚಿಕ್ಕ ಮುಳ್ಳು ಎಲ್ಲಿದೆ ನೋಡು ?
ಮರಿಗುಂಡ : ಅಪ್ಪಾ, ಎರಡೂ ಮುಳ್ಳು ಗಡಿಯಾರದಲ್ಲಿವೆ.
=
ಹುಡುಗ: ಐ ಲವ್ ಯೂ...
ಹುಡುಗಿ: ನಿನಗೆ ತಲೆ ಕೆಟ್ಟಿದೆಯಾ? ಕಪಾಳಕ್ಕೆ ಹೊಡೆದರೆ ದವಡೆ ಹಲ್ಲುಗಳೆಲ್ಲ ಚೆಲ್ಲಾಡಬೇಕು ಹುಷಾರ್?
ಹುಡುಗ: (ತುಂಬಾ ಕೂಲ್ ಆಗಿ) ಅದು ಮಾತ್ರ ಸಾಧ್ಯ ಇಲ್ಲ ಕಣೆ.
ಹುಡುಗಿ- (ಅಚ್ಚರಿಯಿಂದ) ಯಾಕೆ?
ಹುಡುಗ- ಏಕೆಂದರೆ ದಿನವೂ ನಾನು 'ಕೋಲ್ಗೆಟ್' ನಲ್ಲಿ ಬ್ರಷ್ ಮಾಡ್ತೀನಿ!!