ಮಕರಂದ/ದೋಣಿ

ಅವಳು ಕೊಟ್ಟ ಮೌತ್ ಆರ್ಗನ್ ತುಕ್ಕು ಹಿಡಿಯುತ್ತಿದೆ

ನಾವು  ನೀವೆಲ್ಲ ನಮ್ಮ ಸ್ನೇಹ ಸಂಬಂಧದ ಸಂಕೇತವಾಗಿ ನಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ಕೊಡುವುದು ಮತ್ತು ಪಡೆಯುವುದು ಸಹಜ. ಅವು ತಾಜ್‌ಮಹಲ್ ಪ್ರತಿಕೃತಿ ಇರಬಹುದು. ವಿವಿಧ ಬಗೆಯ ಫೋಟೊ ಪ್ರೇಮ್‌ಗಳಿಗೆ ನಮ್ಮ ಅವರ ಫೋಟೊಗಳನ್ನು ಹಾಕಿಕೊಡುವುದು. ನಾವೇ ತಲೆಕೆಡಿಸಿಕೊಂಡು ಅವರಿಗೆ ಇಷ್ಟವಾಗಬಹುದಾದ ರೀತಿಯಲ್ಲಿ ಗ್ರೀಟಿಂಗ್ ಕಾರ್ಡ್ ಸಿದ್ಧಪಡಿಸಿ, ಅದರೊಳಗೆ ನಮ್ಮ ಹೆಸರುಗಳನ್ನು ಬರೆದು ಅವರಿಗೆ ನೀಡಿ ಖುಷಿ ಪಟ್ಟಿರುತ್ತೇವೆ. ಅದರಂತೆ ನನ್ನೋಳು ನನಗೆ 'ಹಾರ್ಮೋನಿಕ' ಎಂಬ ಹೆಸರಿನ 'ಮೌತ್‌ಆರ್ಗನ್‌' ಕೊಟ್ಟಿದ್ದಳು. ಅದನ್ನು ಅವಳು ನನಗೆ ನುಡಿಸುವುದನ್ನು ಹೇಳಿಕೊಡುವ ಮೊದಲೇ ನನ್ನಿಂದ ದೂರವಾಗಿದ್ದು ವಿಧಿ ವಿಪರ್ಯಾಸ.
ಪ್ರತಿಯೊಬ್ಬ ಮನುಷ್ಯನ ಜೀವನ, ಸಾಧನೆ ಮತ್ತು ಸಾರ್ಥಕತೆಯನ್ನು ಅವಲಂಭಿಸಿರುತ್ತದೆ. ಸಾಧನೆ ಕೆಲವರಿಗೆ ಮಾತ್ರ ಸಿದ್ಧಿಸಿದರೆ ಸಾಧನೆಯಲ್ಲಿ ವಿಫಲರಾದವರು ಜೀವನವನ್ನ ಸಾರ್ಥಕಪಡಿಸಿಕೊಳ್ಳುವತ್ತ ಗಮನ ಹರಿಸಬೇಕು. ಅದರಂತೆ ನಾನೊಬ್ಬ ಭಗ್ನ ಪ್ರೇಮಿ. ಅವಳು ನನ್ನ ಬಯಸಿ ಬಂದಿದ್ದಳು ಆದರೆ ನಾನು ಅವಳ ಕೈ ಹಿಡಿಯುವ ಸಾಧನೆ ಮಾಡಲಿಲ್ಲ. 'ನನ್ನ ಲೈಫ್‌ನಲ್ಲಿ ಅವಳು ಸಿಕ್ಕಿದ್ರೂ ನಾನ್ ಪಡೆಯೋಕಾಗ್ದಿರೋ ಹುಡುಗಿ'. ಈಗ ಅವಳು ನನಗಿಂತಲೂ ಹೆಚ್ಚಾಗಿ ಪ್ರೀತಿಸುವ, ಚೆನ್ನಾಗಿ ನೋಡಿಕೊಳ್ಳುವ ಹುಡುಗನನ್ನು ಮದುವೆಯಾಗಬೇಕು. ಅವಳು ಅವಳ ಫ್ಯಾಮಿಲಿಯೊಂದಿಗೆ ಸಂತೋಷವಾಗಿರುವುದನ್ನು ನೋಡಬೇಕೆಂಬುದು ನನ್ನ ಆಸೆ. ಅವಳು ಕೊಟ್ಟ ಮೌತ್ ಆರ್ಗನ್ ನನ್ನಲ್ಲಿಯೇ ಇದೆ. ಅದು ನನ್ನ ಹತ್ತಿರವೇ ಇದ್ದರೆ ಅದನ್ನು ನಾನು ನುಡಿಸಲು ಕಲಿಯುವುದಿಲ್ಲ. ಕಲಿಸಿಕೊಡುವವಳಂತೂ ಮತ್ತೆಂದೂ ನನ್ನ ಬಾಳಿನಲ್ಲಿ ಬರುವುದಿಲ್ಲ. ಆದ್ದರಿಂದ ಅದನ್ನು ಮರಳಿ ಅವಳ ಮಗುವಿಗೆ ಕೊಡಬೇಕೆಂದು ಕೊಂಡಿದ್ದೇನೆ. ಏಕೆಂದರೆ ಅವಳು ನನಗೆ ತೋರಿಸುತ್ತಿದ್ದ ಪ್ರೀತಿಗಿಂತ ಹತ್ತರಷ್ಟು ಪ್ರೀತೀನ ಅವಳ ಮಗುವಿಗೆ ತೋರಿಸುತ್ತಾಳೆ. ಆ ಮಗುವಿಗೆ ಅದನ್ನು ನುಡಿಸುವುದನ್ನು ಹೇಳಿಕೊಡುತ್ತಾಳೆ. ಅಷ್ಟು ಸಾಕು ಈ ಜನ್ಮಕ್ಕೆ. ಅದನ್ನು ನುಡಿಸುವುದನ್ನು ಅವಳು ನನಗೆ ಕಲಿಸಿದಷ್ಟೆ ಆತ್ಮ ತೃಪ್ತಿ ಸಿಗುತ್ತದೆ.  ನಾವಿಬ್ಬರು ಜೊತೆಯಾಗಿ ಹುಚ್ಚ, ಮುಂಗಾರುಮಳೆ, ಕಲ್ಲರಳಿ ಹೂವಾಗಿ, ತಾಜ್‌ಮಹಲ್ ಮತ್ತು ಅಂಬಾರಿ ಈ ಐದು ಸಿನಿಮಾಗಳನ್ನು ಥಿಯೇಟರ್‌ನಲ್ಲಿ ನೋಡಿದ್ದೆವು. ವಿಚಿತ್ರ ಎಂದರೆ ಈ ಐದು ಸಿನಿಮಾಗಳೂ ದುಃಖಾಂತ್ಯ ಕಂಡಿವೆ. ನಾವು ಸಿನಿಮಾಗಳನ್ನು ನೋಡುವಾಗ ಈ ಎಲ್ಲ ಸಿನಿಮಾಗಳ ಟ್ರಾಜಿಡಿ ಎಂಡ್ ಬಗ್ಗೆ ಗಮನಿಸಿರಲಿಲ್ಲ. ಈಗ ನೆನಪಿಸಿಕೊಂಡರೆ ನಾವಿಬ್ಬರೂ ದೂರವಾಗಿರುವುದಕ್ಕೆ ಈ ಸಿನಿಮಾಗಳ ದುಃಖಾಂತ್ಯಗಳಿಂದಾಗಿ ತಕ್ಕ ಸಮರ್ಥನೆ ಸಿಗುತ್ತದೆ.
ಒಣ ಹವೆ ಹವಾಮಾನದಲ್ಲು ಆದಳು ಕಣ್ಣೀರ ರುವಾರಿ ಎದೆಯೊಳಗೆ ಬರೆದು ಹೋದಳು ಸಿಂಪಲ್ಲಾಗಿ ಒಂದು ಲವ್ ಸ್ಟೋರಿ' ಎಂದುಕೊಂಡು ಸಾರ್ಥಕತೆಯ ನಿಟ್ಟುಸಿರು ಬಿಡುವುದಷ್ಟೆ ನನಗೀಗ ಉಳಿದಿರುವುದು.

-ಜಯಪ್ರಕಾಶ ಕರಿಯಪ್ಪ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'ವಿರಾಟ್ ಕೊಹ್ಲಿ ಬೇಗ ಔಟಾದರೆ ನನಗೆ ಊಟವೇ ಸೇರಲ್ಲ': ಸ್ಟಾರ್ ಬ್ಯಾಟರ್ ಬಗ್ಗೆ ನಾನಾ ಪಾಟೇಕರ್ ಹೇಳಿಕೆಯ ಹಳೆಯ ವಿಡಿಯೋ ವೈರಲ್

ಬೆಂಗಳೂರಿನಲ್ಲಿ CJP ಪ್ರತಿಭಟನೆ: ಪ್ರಕಾಶ್ ರಾಜ್, YouTuber ಧ್ರುವ್ ರಾಠಿ ಭಾಗಿ; CEC ರಾಜೀನಾಮೆಗೆ ಬಿಗಿಪಟ್ಟು..!

ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ