ಬ್ಲಾಗ್ಗಳನ್ನು ಬಿಟ್ಟರೆ ಕನ್ನಡಕ್ಕೆ ಸಂಬಂಧಿಸಿದ ಜಾಲತಾಣಗಳು ಬಹಳ ಕಡಿಮೆ ಎಂಬ ಮಾತುಗಳುಂಟು. ಕನ್ನಡ ಸಾಹಿತ್ಯ ಲೋಕಕ್ಕೆ ಸಂಬಂಧಿಸಿದ ಸಮಗ್ರ ಮಾತಿಗಳು ಇನ್ನೂ ಕಂಪ್ಯೂಟರಿನ ಹೃದಯ ಹೊಕ್ಕಿಲ್ಲ ಎಂಬುದನ್ನೂ ನೀವು ಸಮ್ಮೇಳನಗಳ ಭಾಷಣದಲ್ಲಿ ಕೇಳಿರುತ್ತೀರಿ. ಆದರೆ, ಇದು ಸತ್ಯಕ್ಕೆ ದೂರವಾದ ವಿಚಾರ. ಕನ್ನಡ ನಾಡು- ನುಡಿಗೆ ಸಂಬಂಧಿಸಿದಂತೆ ನೂರಾರು ವೆಬ್ಸೈಟ್ಗಳು ನಿರ್ಮಾಣವಾಗಿವೆ. ಆದರೆ, ಅವು ಯಾವುವು? ಅವೆಲ್ಲ ಒಟ್ಟಿಗೆ ಎಲ್ಲಿ ಸಿಗುತ್ತವೆ? ಎಂಬ ಪ್ರಶ್ನೆಗಳೂ ನಿಮ್ಮಲ್ಲಿರಬಹುದು. ಹಾಗಿದ್ದರೆ http://kannada-kannadigaru.blogspot.in/p/popular-kannada-websites.html ಈ ವಿಳಾಸಕ್ಕೊಮ್ಮೆ ಭೇಟಿ ನೀಡಿ.