ಲಂಚ ಪಡೆಯುತ್ತ,
ಕೊಡುತ್ತ ಇರುವವರಿಗೆ
ಸ್ವರ್ಗ;
ನಿಷ್ಠಾವಂತರಿಗೆ
ಬೇರೆ ಕಡೆ ವರ್ಗ!
ಸರಕಾರ
ಲಕ್ಷಗಟ್ಟಲೆ ಖರ್ಚು
ಮಾಡಿ ಪ್ರಮಾಣ ವಚನ
ಸ್ವೀಕಾರ;
ಬಳಿಕ ಪ್ರಮಾಣ ಮಾಡಿದ
ಕೈಯಿಂದಲೇ
ಲಂಚ ಸ್ವೀಕಾರ!
ಕರ ಕರ
ಸರ್ಕಾರ ಹೇಳುತ್ತದೆ-
"ಸಮಯಕ್ಕೆ ಸರಿಯಾಗಿ
ಆದಾಯ ಕರ ಕಟ್ಟಿ";
ದಿನಬಳಕೆಯ ವಸ್ತುಗಳ
ದರ ಮಾತ್ರ
ದಿನೇ ದಿನೇ ತುಟ್ಟಿ!
ಹದ್ದುಗಳು
ಮಾಂಸ ಕಂಡರೆ
ಕಿತ್ತು ತಿನ್ನುವವು
ರಣ ಹದ್ದುಗಳು!
ದೇಶವನ್ನೇ
ಕಿತ್ತು ತಿನ್ನುವವು
ಹಗ'ರಣ' ಹದ್ದುಗಳು!
- ಪರೇಶ ಸರಾಫ