ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮಕರಂದ/ದೋಣಿ

ಕೈ ಮೇಲಿನ ಹಚ್ಚೆ ಅಳಿಸಿಕೋ ಪ್ಲೀಸ್...

Vishwanath S
Updated On : 19 Jul 2013, 6:41 am

ನನ್ನನ್ನು ಕ್ಷಮಿಸು ಪ್ರಿಯಾ ಅಂತ ಮೊದಲೇ ಕೇಳ್ತಾ ಇದ್ದೀನಿ. ನಂಗೊತ್ತು ನೀನು ನನ್ನನ್ನು ಕ್ಷಮಿಸಲ್ಲ. ಆದರೆ ಈ ಪತ್ರ ಓದಿದ ಮೇಲಾದರೂ ಕ್ಷಮಿಸು. ನಮ್ಮ ಪ್ರೀತಿಗೆ ಯಾರ ಕಣ್ಣು ಬಿತ್ತೋ ಏನೋ, ಸಾಗರದಷ್ಟು ಪ್ರೀತಿ ತುಂಬಿದ ಕಣ್ಣು ಸಾವಿಲ್ಲದಿರೋ ಮನೇಲಿ ಸಾಸಿವೆ ಹುಡುಕ್ತಾ ಇದೆ. ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ನಿನ್ನ ಬಿಟ್ಟು ಹೋಗಲು ಕಾರಣ ಪ್ರಾಣವೇ ನನ್ನನ್ನು ಬಿಟ್ಟು ಹೋಗುತ್ತಿರುವುದು ! ನಂಗೊತ್ತು, ನೀನು ನಂಬಲ್ಲ ಅಂತ. ಆದರೆ ವಿಧಿಯಾಟದ ಕಾರಣದಿಂದ ನಾವಿಬ್ಬರೂ ಕಂಡ ಕನಸುಗಳು ನನಸಾಗುವುದಿಲ್ಲ ಎಂಬ ಮುನ್ಸೂಚನೆಗಳು ಸಿಕ್ಕಾಗೋಯ್ತು. ನೀನು ಮನೆಯವರನ್ನೆಲ್ಲಾ ಕಷ್ಟಪಟ್ಟು ಒಪ್ಪಿಸಿದ್ದೇನೆ ಎಂದು ಫೋನ್ ಮಾಡುವ ಹೊತ್ತಿಗೆ, ನನಗೆ ಡಾಕ್ಟರ್ ರಿಪೋರ್ಟ್ ಕೊಟ್ಟಾಗಿತ್ತು. ನಾನೊಬ್ಬ ಕ್ಯಾನ್ಸರ್ ರೋಗಿಯಂತೆ ! ಹೆಚ್ಚು ದಿನ ಬದುಕಲ್ವಂತೆ, ನಿನ್ನನ್ನು ಅರ್ಧ ದಾರಿಯಲ್ಲೇ ಬಿಟ್ಟು ಹೋಗ್ತಾಯಿದ್ದೀನಿ ಅಂತ ಕೊರಗಬೇಡ. ಏನ್ಮಾಡೋದು? ಪರಿಸ್ಥಿತಿ ಎಂಥ ಮನಸ್ಥಿತಿಯನ್ನೂ ಬದಲಿಸಿಬಿಡುತ್ತೆ, ನಿನ್ನನ್ನು ಮದ್ವೆಯಾಗಿ, ಅರ್ಧಕ್ಕೇ ನಿನ್ನ ಬಾಳು ಮುಗಿಸೋಕೆ ಮನಸ್ಸಿಲ್ಲ. ಬೇರೊಬ್ಬರನ್ನು ಮದ್ವೆಯಾಗಿ ಸುಖವಾಗಿರು.
ಪ್ರಿಯಾ, ನಿನಗೆ ಇಷ್ಟವಿಲ್ಲದಿದ್ದರೂ ನನಗೋಸ್ಕರವಾದರೂ ಮದುವೆಯಾಗು. ನೀನು ಹೊಸ ಬಾಳು ಆರಂಭಿಸಿದರೆ ಮಾತ್ರ ನನಗೆ ನೆಮ್ಮದಿ. ಆದರೆ ಒಂದು ಮಾತು ಕಣೆ, ಏನ್ ಏಕವಚನದಲ್ಲಿ ಮಾತಾಡ್ತಾ ಇದಿಯಲ್ಲೋ ಅಂದ್ಕೋತಿದೀಯ ಅಲ್ವ? ಇರಲಿ ಬಿಡು, ಕೊನೆಯ ಬಾರಿ ಅಲ್ವಾ? ನೀನು ಏನೂ ಅಂದುಕೊಳ್ಳಲ್ಲಾ ಅಂತ 'ಕಣೇ' ಎಂದು ಕರೆದೆ.
ನೀನು ನನ್ನನ್ನು ಹೃದಯದಿಂದ ತೆಗೆದು ಹಾಕದೆ ಇದ್ದರೂ ನಿನ್ನ ಕೈ ಮೇಲೆ ಇರೋ ನನ್ನ ಇನಿಷಿಯಲ್‌ನ ದಯವಿಟ್ಟು ಅಳಿಸಿ ಹಾಕಿಬಿಡು. ಕಾಲ ಚಕ್ರ ಬದಲಾದಂತೆ ನಿನ್ನ ಬಾಳಿನಲ್ಲಿ ಬೇರೊಬ್ಬ ಹುಡುಗನ ಪ್ರವೇಶವಾಗಬಹುದು. ಆಗ ನಿನ್ನ ಕೈ ಮೇಲಿರೋ ಹಚ್ಚೆ ನಿನ್ನ ಗಂಡನ ಮನಸ್ಸಿನಲ್ಲಿ ಅನುಮಾನದ ಹುತ್ತ ಬೆಳೆಸುವಂತೆ ಮಾಡಬಾರದಲ್ವಾ, ನಮ್ಮಿಬ್ಬರಿಗಿದ್ದ ಪವಿತ್ರ ಸಂಬಂಧವನ್ನು ಕೆಟ್ಟದಾಗಿ ಕಲ್ಪಿಸಿದರೆ ನಿನ್ನ ಬಾಳು ನರಕ ಆಗಿಬಿಡುತ್ತೆ. ಹಾಗಾಗಿ ನನ್ನ ಜೊತೆ ಆ ಹಚ್ಚೆಯೂ ಅಳಿಸಿ ಹೋಗಲಿ. ನಾನಿರುವವರೆಗೂ ನಿನ್ನ ಹೆಸರು ನನ್ನೊಂದಿಗಿರಲಿ ಅಂತ ಕೈ ಮೇಲೆ ಹಚ್ಚೆ ಹುಯ್ಯಿಸಿಕೊಂಡೆ, ಇವತ್ತು ನಾನೇ ಈ ಭೂಮಿಯ ಋಣ ಬಿಟ್ಟು ಹೋಗ್ತಾ ಇದ್ದೀನಿ. ಹೋಗಿ ಬರ್ಲಾ ಪ್ರಿಯಾ ?


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement