ನಗಬೇಕು...
ಗುಂಡ: ಸುಖ ಅಂದರೆ ಯಾವುದು?
ತಿಮ್ಮ: ಅಮೆರಿಕದ ಸಂಬಳ, ಬ್ರಿಟೀಷರ ಮನೆ, ಚೀನಿಯರ ಫುಡ್ ಮತ್ತು ಭಾರತದ ಹೆಂಡತಿ.
ಗುಂಡ: ವಾ.. ವಾ.. ಮತ್ತೆ ನರಕ ಎಂದರೆ?
ತಿಮ್ಮ: ಅಮೆರಿಕಾದ ಹೆಂಡತಿ, ಬ್ರಿಟೀಷರ ಊಟ, ಚೀನಿಯರ ಮನೆ ಮತ್ತು ಭಾರತದ ಸಂಬಳ.
ಗುಂಡ: ಹೌದು.. ಅಮೆರಿಕಾದ ಹೆಂಡತಿ ಅಂದರೆ ಯಾಕೆ ನರಕ?
ತಿಮ್ಮ: ವರ್ಷಕ್ಕೊಮ್ಮೆ ಅವರು ಗಂಡನನ್ನು ಚೇಂಜ್ ಮಾಡ್ತಾರೆ ಕಣೋ...
---
ಗುಂಡ: ನಿನಗಿಷ್ಟವಾದ ಒಂದು ಒಳ್ಳೆ ಮೆಲೋಡಿಯಸ್ ಹಾಡನ್ನು ಕೆಟ್ಟ ಹಾಡನ್ನಾಗಿ ಮಾಡುವುದು ಹೇಗೆ ?
ತಿಮ್ಮ: ತುಂಬಾ ಸಿಂಪಲ್ ಕಣೋ...
ಗುಂಡ: ಅದು ಹೇಗೆ ?
ತಿಮ್ಮ: ಆ ಹಾಡನ್ನು ನೀನು ಹಾಡಿ, ಅದನ್ನು ರೆಕಾರ್ಡ್ ಮಾಡಿ ಮತ್ತೆ ಮತ್ತೆ ಕೇಳುತ್ತಿರು.
---
ತಿಮ್ಮ (ಗಡಿಬಿಡಿಯಲ್ಲಿ ಡಾಕ್ಟರ್ಗೆ ಫೋನ್ ಮಾಡಿ): ಡಾಕ್ಟರ್.. ಡಾಕ್ಟರ್.. ನನ್ನ ಹೆಂಡತಿ ಗರ್ಭಿಣಿ, ಅವಳಿಗೆ ಹೊಟ್ಟೆ ನೋವು ಶುರುವಾಗಿದೆ..
ಡಾಕ್ಟರ್: ಇದು ಅವಳ ಮೊದಲ ಮಗೂನಾ ?
ತಿಮ್ಮ: ಇಲ್ಲಾ ಡಾಕ್ಟರ್, ನಾನು ಅವಳ ಗಂಡ ಮಾತನಾಡುವುದು!
---
ತಿಮ್ಮ: ನಿನ್ನ ಹೆಂಡ್ತಿ ಯಾಕೋ ಯಾವತ್ತೂ ಸಿಟ್ಟಾಗೇ ಇರ್ತಾಳೆ ?
ಗುಂಡ: ತಪ್ಪು ನಂದೇ ಕಣಪ್ಪಾ..
ತಿಮ್ಮ: ಯಾಕೆ ಏನಾಯಿತು ?
ಗುಂಡ: ಒಂದ್ಸಲ ಸಿಟ್ಟಿನ ಮುಖಭಾವದಲ್ಲದ್ದರೆ ನೀನು ಚೆನ್ನಾಗಿ ಕಾಣಿಸುತ್ತೀಯಾ ಅಂದಿದ್ದೆ.
---
ಗುಂಡ: ಲೇ ತಿಮ್ಮ, ಸಿಕ್ಕಾಪಟ್ಟೆ ಕುಡಿದು ಬಿಟ್ಟಿದ್ದೀಯಾ?
ತಿಮ್ಮ: ಏನ್ ಮಾಡ್ಲಿ ಗುರು, ಸಹವಾಸ ದೋಷ.
ಗುಂಡ: ಏನಾಯಿತು?
ತಿಮ್ಮ: ನಾವು ಆರು ಸ್ನೇಹಿತರು ಕಣೋ, ಆರು ಬಿಯರ್ ಬಾಟಲ್ಗಳನ್ನು ತಗೊಂಡ್ವಿ. ಅದರಲ್ಲಿ ಐವರು ಡ್ರಿಂಕ್ಸೇ ಮಾಡಲ್ಲ!
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.