ಮೊಂಡಾಟದ ಜೇನಳ ಜತೆ ಪಾದ್ರಿ ಮಾತಾಟ
ಡಬ್ಲ್ಯು.ಬಿ. ಏಟ್ಸ್‌ನ 'Crazy Jane Talks With The Bishop' ಎಂಬ ಪದ್ಯವನ್ನು ಅದರ ಮೂಲೋದ್ದೇಶಕ್ಕೆ ಧಕ್ಕೆಯಾಗದಂತೆ ಅನಂತಮೂರ್ತಿ, ಲಂಕೇಶ್ ಕೊಂಚ ಭಿನ್ನವಾಗಿ ಅನುವಾದಿಸಿದರು. ಅದು ಈ ಹಿಂದಿನ 'ದೋಣಿ'ಯಲ್ಲಿ ಪ್ರಕಟವಾಗಿತ್ತು.
ಏಟ್ಸ್‌ನ ಇದೇ ಕವಿತೆ ಇಟ್ಟುಕೊಂಡು 'ನಾಗೇಶ ಮೈಸೂರು' ಅವರು ಅನುವಾದಿಸಲು ಯತ್ನಿಸಿದ್ದಾರೆ. ಅದರ ಪೂರ್ಣರೂಪ ಇಲ್ಲಿದೆ...
ನಡುಹಾದಿಯಲೊಬ್ಬ ದಾರಿಹೋಕ ಪಾದ್ರಿ
ಸಿಕ್ಕಿ ಇಬ್ಬರ ಕಷ್ಟ ಸುಖ ಮಾತಾಟಕ್ಕಿಳಿದ.
'ಪ್ರಸ್ತಭೂಮಿ ಸ್ತನ, ಜೋತಾಡಿವೆ ಘನ
ನರನಾಡಿ ಅನಾಡಿ ಶೀಘ್ರ ಸೊರಗಲಿದೆ ಒಣಗಿ
ಇನ್ನಾದರೂ ದೇಗುಲವಾಗಿಡು ಮನ,
ಬಿಟ್ಟೆಲ್ಲ ಹೊಲಸಿನ ಧ್ಯಾನ.'
ಮಂತ್ರದಲೆ ಉಗುಳಿದ್ದಂತೆ ಪಚ್ಚೆ ಕೊಚ್ಚೆಯೊ ಪಾದ್ರಿ,
ಹೊಲಸಿಗೂ ರಸಿಕತೆಗೂ ತೆಳು ಹಾಳೆಯ ಕಸ', ನಾ ಚೀರಿದ್ದೆ.
'ಸಂಗಾತಿಗಳೆಲ್ಲ ಹೋದರೂ ನಿಜ, ಅದೇ ಬದುಕ ಕಣಜ
ಗೋರಿಯ ಸಜ್ಜೆ ಮಜ್ಜನವೆ ಅಂತಿಮ ಶಯ್ಯೆಯೆಂದೂ ಗೊತ್ತು,
ಸ್ವರ್ಗಸುಖ ಮುಳುಗಿದ ದೇಹ ಕೇಳದು ವೇದಾಂತ
ಸ್ವಂತಿಕೆ ಹಮ್ಮು ಗರ್ವ ಬಿಡದೊ ಹೃದಯ ಕವಾಟ.'
'ಬಿಮ್ಮು ಬಿಗುಮಾನ ಹೆಣ್ಣಿಗೆ ಸಹಜ
ಕೊಳಕು ರತಿಯಾಕಾಂಕ್ಷೆ ಬಳಲಿ
ಕಾಣೆಯ ಸರಸದರಮನೆ ಪೀಠ ಕೊಳೆಗೇರಿ
ಮಡಿ ಮೈಲಿಗೆ ಸೇರುವ ಒಂದೇ ದಾರಿ;
ಮಸಲ ಯಾವುದಿದೆ ಹೇಳು ಬಿಡಿ ಯಾ ಹಿಡಿ ಸರಕು
ಎಲ್ಲಾ ಬಾಡಿಗೆಗಿಟ್ಟ ಲೆಕ್ಕ ಸ್ವಾರ್ಥಲೇಪ ಸಾತ್ವಿಕಕು'
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.