ಯುದ್ಧದ ವೇಳೆ ಪತ್ರಿಕೆಗಳೂ ಆಯುಧದಂತೆ ಕೆಲಸ ಮಾಡುತ್ತವೆ. ಇಂಥ ಸನ್ನಿವೇಶದಲ್ಲಿ ಸಾಹಿತಿಗಳೇನು ಮಾಡಬೇಕು ಎಂಬುದಕ್ಕೆ ಸಾರ್ವಕಾಲಿಕ ಉತ್ತರ ನೀಡಿದವನು ಫ್ರೆಂಚ್ ಲೇಖಕ ಆಲ್ಬರ್ಟ್ ಕಮುಸ್. ನೊಬೆಲ್ ಗೆದ್ದ ಚಿಂತಕನೂ ಹೌದು. ಎರಡನೇ ಮಹಾಯುದ್ಧದ ಸಮಯದಲ್ಲಿ ನಾಝಿಗಳ ದಬ್ಬಾಳಿಕೆ ವಿರುದ್ಧ 'ಕೊಂಬ್ಯಾಟ್' ಪತ್ರಿಕೆಯಲ್ಲಿ ಸತತ ಲೇಖನಗಳನ್ನು ಹರಿಸಿ, ಕೆಲವು ತಿಂಗಳು ಕಮುಸ್ ಭೂಗತನಾಗಿಯೇ ಬದುಕಿದ್ದ. ಅಲ್ಲದೆ, ಸ್ವಲ್ಪ ಸಮಯ ಅದರ ಸಂಪಾದಕತ್ವದ ಹೊಣೆಯನ್ನೂ ಹೊತ್ತಿದ್ದ. ಅಂದಹಾಗೆ, 'ಕೊಂಬ್ಯಾಟ್' ಆ ದಿನಗಳಲ್ಲಿ ಅಂಡರ್‌ಗ್ರೌಂಡ್ ನ್ಯೂಸ್‌ಪೇಪರ್. ಕಮುಸ್‌ನ ಆ ಪತ್ರಿಕೆಯನ್ನು ನೀವೂ ನೋಡುವುದಾದರೆ www.newcombat.net ಅನ್ನು ಕ್ಲಿಕ್ಕಿಸಿ.