ದುಃಖವನ್ನು ವಯೋಲಿನ್ ತಂತಿಯಲ್ಲಿ
ತೂಗು ಹಾಕಿದೆ ರಾಗದಂತೆ
ಎಲ್ಲ ಕಿವಿಗಳು ಕಿವುಡಾಗಿ ಸಾಗಿದವು
ದುಃಖದ ಸಂಗೀತ ಕೇಳಿಯೂ ಕೇಳದಂತೆ
ಕಣ್ಣಹನಿಗಳನ್ನು ಪಾತ್ರೆಯಲ್ಲಿ ಹಿಡಿದು
ಸಂಗ್ರಹಿಸಿದೆ ಪುರಾವೆ ತೋರಿಸಲೆಂದೆ
ಕಂಡೂಕಾಣದ ಕುರುಡರಂತೆ
ಸಾಗಿದರು ಎಲ್ಲರೂ ಮುಂದೆ ಮುಂದೆ
ಈಗ
ದುಃಖವನ್ನು ಮನಸ್ಸಿನಲ್ಲಿ
ಬಚ್ಚಿಟ್ಟಿದ್ದೇನೆ;
ಮನಸ್ಸಿಗೂ ತಿಳಿಯದ ಹಾಗೆ
ಎಂದಿಗೂ ಹೊರಬೀಳದ ಹಾಗೆ
ಹೇಗೆಂದರೆ...
ಹಾಗೆ!
- ನರೇಶ ನಾಯ್ಕ
naiknaresh8@gmail.com