ಗುಂಡ: ಮದುವೆಯಾದರೆ ಏನಾಗುತ್ತೆ?
ತಿಮ್ಮ: ಒಂದು ಮಹಿಳೆಯನ್ನು ಸಂತೋಷವಾಗಿಡಬಹುದು
ಗುಂಡ: ಮದುವೆಯಾಗದಿದ್ದರೆ?
ತಿಮ್ಮ: ಬಹಳಷ್ಟು ಮಹಿಳೆಯರನ್ನು ಸಂತೋಷವಾಗಿಡಬಹುದು
ಗುಂಡ: ಬ್ಯಾಚುಲರ್ ಆಗಿರುವವರು ಮದುವೆ ಆದವರನ್ನು ಲಕ್ಕಿ ಅನ್ಕೋತಾರೆ.. ಮದುವೆ ಆದವರು ಬ್ಯಾಚುಲರ್‌ನನ್ನು ಲಕ್ಕಿ ಅನ್ಕೋತಾರೆ..
ತಿಮ್ಮ: ಐ ಅಗ್ರೀ... ಆದರೆ ಕಾರಣ ಏನಿರಬಹುದು?
ಗುಂಡ: ಸಿಂಪಲ್ ಕಣೋ... ಬ್ಯಾಚುಲರ್‌ಗಳು ಮದುವೆ ಆದವರ ನೈಟ್ ಬದುಕನ್ನು ನೆನೆಪಿಸಿಕೊಳ್ಳುತ್ತಾರೆ. ಮದುವೆ ಆದವರು ಬ್ಯಾಚುಲರ್‌ಗಳ ಡೇ ಬದುಕನ್ನು ನೆನೆಪಿಸಿಕೊಳ್ಳುತ್ತಾರೆ.
ನರ್ಸ್: ಡಾಕ್ಟರ್ ನಿಮ್ಮ ವೈಫ್‌ದು ಫೋನ್ ಇದೆ..
ಡಾಕ್ಟರ್: ಏನಂತೆ...
ನರ್ಸ್: ಅವರೇನೋ ತುಂಬಾ ಖುಷಿಯಾಗಿದ್ದಾರಂತೆ, ಅದಕ್ಕೆ ನಿಮಗೊಂದು ಕಿಸ್ ಕೊಡಬೇಕಂತೆ..
ಡಾಕ್ಟರ್: ಸರಿ, ನಾನೀಗ ಬ್ಯೂಸಿ ಆಗಿದ್ದೇನೆ. ಆ ಕಿಸ್ ಅನ್ನು ನೀನು ತಗೋ, ನನಗೆ ಆಮೇಲೆ ನೀನು ಕೊಡು..
ಮರಿಗುಂಡ: ಎಲ್ಲಾ ಸ್ಕೂಲ್, ಕಾಲೇಜ್ ಹತ್ತಿರ ನಿಧಾನವಾಗಿ ಚಲಿಸಿ ಎನ್ನುವ ಫಲಕ ಇರುತ್ತಲ್ವಾ ?
ಮರಿತಿಮ್ಮ: ಹೌದು.
ಮರಿಗುಂಡ: ಆದ್ರೆ ಮಹಿಳಾ ಕಾಲೇಜ್ ಎದುರು ಯಾಕೆ ಇರೋಲ್ಲ ?
ಮರಿತಿಮ್ಮ: ಅಲ್ಲಿ ಇಲ್ಲಾಂದ್ರೂ... ಎಲ್ಲಾ ವಾಹನಗಳು ನಿಧಾನವಾಗಿಯೇ ಚಲಿಸುತ್ತವೆ.