ನಾನು ಮತ್ತು ಅವಳು
ರೈಲು ಹಳಿಗಳ ಹಾಗೆ
ಒಟ್ಟಿಗಿದ್ದರೂ ಒಂದಾಗಲಿಲ್ಲ
-
ಅವಳೊಂದು ಸುಂದರ ಪ್ರೀತಿ
ಜೊತೆಗಿರಿಸಬೇಕು ಅಂದುಕೊಂಡೆ,
ಕಥೆಯಾಗಿ ಹೋದಳು.
-
ಪ್ರೀತಿಯ ಕನ್ನಡಿಯಲ್ಲಿ ಸಾವಿರ ಚೂರು.
ಪ್ರತಿ ಚೂರಿನಲ್ಲೂ ಈಗ
ಮತ್ತ್ಯಾರದ್ದೋ ಪ್ರತಿಬಿಂಬ
-
ನನ್ನ ಕಥೆ ಕೇಳಿ ಖಿನ್ನನಾದ ಚಂದ್ರನಿಗೆ,
ಸಾವರಿಸಿಕೊಳ್ಳಲು
ಹದಿನೈದು ದಿವಸ ಬೇಕಾಯಿತು
-
ದಯಮಾಡಿ ಕೊಟ್ಟು ಬಿಡು
ಹಿಡಿ ಪ್ರೀತಿ,
ಈ ಭಿಕಾರಿಗೆ ಸಿಕ್ಕು
ಯುಗಗಳೇ ಸಂದವು.
-
ಗೋರಿಯ ಮೇಲರಳಿದ ಚೆಂಗುಲಾಬಿಯ ಬೇರು,
ಗೋರಿಯೊಳಗಿನವನ ಹೃದಯದಲ್ಲಿತ್ತು.
-
ಪ್ರೀತಿ ಎಂಬುದು
ಒಂದು ನಿರ್ವಂಚಕ ಸ್ವಾರ್ಥ.
- ಪದ್ಮಪ್ರಸಾದ್ ಜೈನ್