ಗುಂಡ ಮತ್ತು ಗುಂಡಿ ಸೆಕೆಂಡ್ ಹನಿಮೂನಿಗೆಂದು ಬಂದು, ಹೋಟೆಲ್‌ನಲ್ಲಿ ತಂಗಿದ್ದರು. ಗುಂಡ ಒಮ್ಮೆಲೇ ಬೊಂಬಡಾ ಹೊಡೆಯಲು ಆರಂಭಿಸಿದ.
ಗುಂಡ: ಯಾರ್ರೀ ಅಲ್ಲಿ, ಬನ್ನಿ ಬೇಗ... ನನ್ನ ಹೆಂಡತಿ ಕಿಟಕಿಯಿಂದ ಧುಮುಕಿ ಸಾಯಬೇಕೆಂದಿದ್ದಾಳೆ.
ರಿಸೆಪ್ಸನಿಸ್ಟ್: ಅದಕ್ಕೆ ನಾವು ಏನು ಮಾಡಕ್ಕಾಗುತ್ತೆ ಹೇಳಿ?
ಗುಂಡ: ಕಿಟಕಿ ತುಂಬಾ ಬಿಗಿಯಾಗಿದೆ. ಬಂದು ಸ್ವಲ್ಪ ಓಪನ್ ಮಾಡ್ರೀ
=
ಗುಂಡ: ಸಾರ್... ನನ್ನ ಹೆಂಡತಿ ಕಾಣೆಯಾಗಿದ್ದಾಳೆ.
ಪೋಸ್ಟ್ ಮ್ಯಾನ್: ಇದು ಪೋಸ್ಟ್ ಆಫೀಸ್, ಪೊಲೀಸ್ ಸ್ಟೇಷನ್‌ಗೆ ಹೋಗಿ ಕಂಪ್ಲೇಟ್ ಕೊಡಿ.
ಗುಂಡ: ಒಹ್.... ಸಾರಿ... ನನಗಾಗಿರುವ ಖುಷಿಗೆ ಎಲ್ಲಿಗೆ ಹೋಗುತ್ತಿದ್ದೇನೆಂದು ಅರ್ಥಾನೆ ಆಗ್ತಿಲ್ಲ.
=
ಗುಂಡ: ಬೊಗೊಳೋ ನಾಯಿ ಯಾಕೋ ಕಚ್ಚಲ್ಲಾ?
ತಿಮ್ಮ: ನನಗೆ ಗೊತ್ತಿಲ್ಲ... ನೀನೇ ಹೇಳಪ್ಪಾ...
ಗುಂಡ: ಪೆದ್ದ, ಒಂದೇ ಸಮಯದಲ್ಲಿ ಎರಡು ಕೆಲಸ ಹೇಗೋ ಮಾಡಕ್ಕಾಗತ್ತೆ?