ಟಿಕೆಟ್ಟಾಗಿದೆ, ಲಗ್ಗೇಜೂ ರೆಡಿ ಇದೆ. ಹುಡ್ಗ ಈಗ್ಲೆ ಬರ್ತಾನೆ, ಓಡ್ ಹೋಗ್‌ಬಿಡ್ತೀವಿ... ಎನ್ನುವ ವೇಗ ಅವಳ ಕಣ್ಣ ಕಡಲೊಳಗೆ ತುಳುಕಾಡುತ್ತಿದೆ. ಶಿಲ್ಪಿ ಕಂಡ ಕನಸಲ್ಲ. ಬೆಣ್ಣೆಯ ಚೆಂಡಲ್ಲ. ತುಟಿಯ ತಿರುವಿನಲ್ಲೊಂದು ನಗು ಉಕ್ಕಿಸಿ, ಹಲ್ಲೂ ನನ್ನಷ್ಟು ಬಿಳಿಯಿಲ್ಲ ಎಂದು ಬಾಯಿಯ ಬಾಗಿಲು ಮುಚ್ಚಿ, ಈಗಷ್ಟೇ ಇಬ್ಬನಿಯಲಿ ಮಿಂದು ಕೂತ ಈಕೆ ಯಾರೆಂದು ಹೇಳಬಲ್ಲಿರಾ? ದೇವ್ರಾಣೆ ಶಿಲ್ಪಾ ಶೆಟ್ಟಿನೇ!