ಮಕರಂದ/ದೋಣಿ

ನ್ಯಾನೋಕಥೆಗಳು

ಓದಿನಲ್ಲಿ ಆಸಕ್ತಿಯಿದ್ದ ಅಕ್ಕನ ಮಗಳನ್ನು ವಿವಾಹವಾದ ಅನಕ್ಷರಸ್ಥನೊಬ್ಬ, ತನ್ನ ಮಡದಿಯನ್ನು 'ಕೂಲಿನಾಲಿ' ಮಾಡಿ ಚೆನ್ನಾಗಿ ಓದಿಸಿದನು...

ಓದಿನಲ್ಲಿ ಆಸಕ್ತಿಯಿದ್ದ ಅಕ್ಕನ ಮಗಳನ್ನು ವಿವಾಹವಾದ ಅನಕ್ಷರಸ್ಥನೊಬ್ಬ, ತನ್ನ ಮಡದಿಯನ್ನು 'ಕೂಲಿನಾಲಿ' ಮಾಡಿ ಚೆನ್ನಾಗಿ ಓದಿಸಿದನು. ಚೆನ್ನಾಗಿ ಓದಿ ಸರ್ಕಾರಿ ಕೆಲಸ ಪಡೆದ ಯುವತಿ "ತನಗೆ ಸರಿಯಾದ ಜೋಡಿ ಇವನಲ್ಲ" ಎಂದು ಭಾವಿಸಿ ಅವನನ್ನು ಬಿಟ್ಟು ಹೋದಳು!
=
ಬಂದ ಬರಗಾಲಕ್ಕೆ ದೇವರ ಮುನಿಸೇ ಕಾರಣ ಎಂದು ಭಾವಿಸಿದ ಗ್ರಾಮಸ್ಥರು ಮರಗಳನ್ನು ಕಡಿದು ಸುಂದರ ದೇವಾಲಯವನ್ನು ಕಟ್ಟಿದರು!
=
ಯುವಕನಿಂದ ವಂಚನೆಗೊಳಗಾದ ಹುಡುಗಿಗೆ ನ್ಯಾಯ ಕೊಡಿಸಲು ಮಹಿಳೆಯೊಬ್ಬಳು ಹೋರಾಡಿ, ವಂಚಿತೆಗೆ ಹಣ ಕೊಡಿಸಿದಳು. ಅವಳಿಂದ ಕಮೀಷನ್ ರೂಪದಲ್ಲಿ ಪಾಲು ಪಡೆದಳು!
=
ಗೆಳೆಯರೊಂದಿಗೆ ಬಾಜಿ ಕಟ್ಟಿಕೊಂಡ ಯುವಕನೊಬ್ಬ ಕುರುಡನಂತೆ ನಟಿಸಿ ರಸ್ತೆಯನ್ನು ಸುಂದರ ತರುಣಿಯ ಸಹಾಯದಿಂದ ದಾಟಿದ. ಸತ್ಯ ತಿಳಿದ ತರುಣಿ ಕೆಲ ದಿನಗಳ ನಂತರ ರಸ್ತೆಯಲಿ ನೈಜ ಕುರುಡನೊಬ್ಬ ರಸ್ತೆ ದಾಟಿಸುವಂತೆ ಬೇಡಿಕೊಂಡರೂ ಸುಳ್ಳೆಂದು ಭಾವಿಸಿ ಹಾಗೆಯೇ ಹೋದಳು!
=
ಜನರಿಗೆ ಕುಡಿಯುವ ನೀರು ಇಲ್ಲದಂತಹ ಊರಿನಲ್ಲಿ ಗಣ್ಯರ ಪ್ರಭಾವದಿಂದ ಹೊಸದಾಗಿ ಬಾರೊಂದು
ಆರಂಭವಾಗಿತ್ತು!
=
ಅದುವರೆಗೂ ತಲೆನೋವು ಅಂದ್ರೇನೇ ತಿಳಿಯದ ವ್ಯಕ್ತಿಗೆ ಒಮ್ಮೆ ತಲೆನೋವು ಬಂತು. ಆ ದಿನ ಮನೆಯವರೆಲ್ಲಾ
ಅವನನ್ನು ಕೆಲಸಕ್ಕೆ ಕಳಿಸದೇ ಚೆನ್ನಾಗಿ ಆರೈಕೆ ಮಾಡಿದರು. ಅಂದಿನಿಂದ ಅವನಿಗೆ ಆಗಾಗ್ಗೆ ತಲೆ ನೋವು
ಬರತೊಡಗಿತು!
= ಬಸವನಗೌಡ ಹೆಬ್ಬಳಗೆರೆ
ಚನ್ನಗಿರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!