ಕನಸೆಂದರೆ ಏನೆಂದು
ಅರ್ಥ ತಿಳಿಯದವನ
ಹೆಗಲೇರಿ ಕೂತಿದ್ದಾಳೆ
ನನಸು ಮಾಡೆಂದು...!
=
ಮೊದಲ ನೋಟಕ್ಕೆ
ಅವಳ ಮುಂಗುರುಳ
ಉರುಳಿಗೆ ಬಿದ್ದಾಯಿತು.
ಈಗ ಉಸಿರುಗಟ್ಟುತ್ತಿದೆ...!
=
ನೀನು ನನ್ನೆದೆಯ ಸಮೀಪ
ಹಾದು ಹೋದಾಗಲೆಲ್ಲಾ
ತಿಂಗಳ ಬೆಳಕಿನ
ಸವಿ ಉಣ್ಣುತ್ತೇನೆ...!
=
ಕಿವಿ ಮುಚ್ಚಿಕೊಂಡರೂ
ಹೆಜ್ಜೆ-ಹೆಜ್ಜೆಗೆ
ನೆನಪಾಗುತ್ತದೆ ಅವಳ
ಗೆಜ್ಜೆ ಸದ್ದು...!
=
ಕೂಗಳತೆಯ ದೂರದಲ್ಲಿ
ಕಾಯುತ್ತಿದ್ದಾಳೆ.
ಕೂಗಿ ಕರೆಯುವ ಹಾಗಿಲ್ಲ
ಊರಿಡೀ ಗೊತ್ತಾಗುತ್ತದೆ..
= ಸಂದೀಪ ಫಡ್ಕೆ, ಮುಂಡಾಜೆ