ಮಕರಂದ/ದೋಣಿ

ಹೂಂ ಕಣೋ, ನನ್ನ ಜೀವ ನಿನ್ನ ನಗೆಯಲ್ಲಿದೆ...(ಈ ಹೃದಯ ಹಾಡಿದೆ)

ಮಗುವಿನಂತ ಗೆಳೆಯಾ, ಚೆನ್ನಾಗಿರುವಿಯಲ್ಲವೇ? ಫೋನಿನಲ್ಲಿ, ಮೆಸೇಜ್‌ನಲ್ಲಿ ನಿನ್ನ ಗೋಳು ಹೊಯ್ದುಕೊಳ್ಳುವ, ಪ್ರೀತಿಸಿಕೊಳ್ಳುವ, ಜಗಳ...

ಮಗುವಿನಂತ ಗೆಳೆಯಾ, ಚೆನ್ನಾಗಿರುವಿಯಲ್ಲವೇ? ಫೋನಿನಲ್ಲಿ, ಮೆಸೇಜ್‌ನಲ್ಲಿ ನಿನ್ನ ಗೋಳು ಹೊಯ್ದುಕೊಳ್ಳುವ, ಪ್ರೀತಿಸಿಕೊಳ್ಳುವ, ಜಗಳ ಕಾದು ಕಣ್ಣೀರು ಬರಿಸುವ ನನ್ನ ಮನಸ್ಸೇಕೋ ಇಂದು ಮುನಿಸಿಕೊಂಡಿದೆ ನೋಡು, ಲೇಖನಿ ತನ್ನಿಂತಾನೇ ಸ್ತಬ್ಧವಾಗುತ್ತಿದೆ. ಕಂಬನಿ ತಡೆಯಿಲ್ಲದೇ ಜಾರುತ್ತಿದೆ. ನಿನಗೆ ಗೊತ್ತಾ ನನ್ನ ಮನಸ್ಸಿನಿಂದ ನಿನ್ನನ್ನು, ನಿನ್ನ ನೆನಪುಗಳನ್ನು ಬೇರ್ಪಡಿಸುವುದು ಹಾಲಿನಿಂದ ಜೇನನ್ನು ಬೇರಾಗಿಸಿದಷ್ಟೇ ಸುಲಭ ಅಲ್ಲವೇ ?
ನಮ್ಮ ಪರಿಚಯವೇ ವಿಚಿತ್ರವಾಗಿತ್ತು ಅಲ್ವಾ ಚಿದು. ಗೆಳೆತನಕ್ಕೆ ನಾಂದಿ ಹಾಡಿದುದು ಒಪ್ಪಂದಗಳ ಮೂಲಕವೇ. ಗೆಳೆತನಕ್ಕೂ ಮಿಗಿಲಾದ ಭಾವವೊಂದು ಹೃದಯದೊಳಗೆ ಮಿಸುಕಾಡತೊಡಗಿದಾಗ ಅದಕ್ಕೊಂದು ಹೆಸರಿಡುವ ಗೋಜಿಗೇ ಹೋದವರಲ್ಲ ನಾವು. ಆದರೂ ಭೋರ್ಗರೆಯುತ್ತಾ  ದುಮ್ಮಿಕ್ಕುತ್ತಿದ್ದ ಆ 'ಭಾವ'ಕ್ಕೆ ಆಣೆಕಟ್ಟು ಕಟ್ಟುವ ವ್ಯರ್ಥಪ್ರಯತ್ನ ಮಾಡಿದ್ದಂತೂ ನಿಜ ತಾನೆ... ದಿನೇ ದಿನೇ ಗಾಢವಾಗುತ್ತಿರುವ ನಮ್ಮ ಬಂಧನವನ್ನು ನೆನೆದಾಗಲೆಲ್ಲಾ ಹೃದಯ ಭಾರವಾಗುತ್ತಿತ್ತು. ಮನ ಮುದುಡಿ ಮಂಕಾಗುತ್ತಿತ್ತು. ಯಾಕೆಂದರೆ, ಬಾಳ ಹಾದಿಯ ಕೊನೆಯ ಗುರಿಯವರೆಗೂ ಕೈಕೈ ಬೆಸೆದು ನಡೆಯುವ ನಮ್ಮ ಆಸೆಗೆ ಅಡ್ಡಿಗಳೋ ನೂರಾರು. ಅವೆಲ್ಲಕ್ಕೂ ಮಿಗಿಲಾದ ಕಾರಣ ನಮ್ಮ ಪುಟ್ಟ ಮನಸ್ಸುಗಳು. ಯಾವುದೇ ಕಾರಣಕ್ಕೂ ಎಂಥದೇ ಸಂದರ್ಭದಲ್ಲೂ ಹೆತ್ತವರಿಗೆ ನೋವುಣಿಸಬಾರದೆಂಬ ಕಕ್ಕುಲಾತಿ. ಮದುವೆ ಎಂಬ ಮೂರಕ್ಷರದಲ್ಲಿ ಕೊನೆಯಾಗುವ ಪ್ರೀತಿ ಕಳೆದು ಹೋಗುವ ಸ್ನೇಹವೂ ನಮ್ಮದಲ್ಲ.
ಹೆಸರಿಡದ ಬಂಧಕ್ಕೆ ಬಂಧುಗಳು ನಾವು. ಅಂತೆಯೇ ಬೇರಾಗಬೇಕಾಗಿರುವ ಮನಸ್ಸುಗಳ ಮಾಲೀಕರೂ ನಾವು. ಇದೇ ಗೆಳೆಯಾ ನಿನ್ನ ಹುಟ್ಟುಹಬ್ಬಕ್ಕೆ ನಿನ್ನ ಪ್ರಾಣ ಸ್ನೇಹಿತೆಯ ಉಡುಗೊರೆ. ನಿನ್ನಿಂದ ದೂರಾಗಬೇಕೆಂಬ ಭಾವವನ್ನೇ ನನ್ನಿಂದ ದೂರಮಾಡಿ ಇನ್ನಿಲ್ಲದಷ್ಟು ಹತ್ತಿರವಾಗಿಹೋದವನು ನೀನು. ಪ್ರತಿದಿನ ನನ್ನ ಬೆಳಗುಗಳ ಆರಂಭ ನಿನ್ನಿಂದಲೇ, ಸಂಜೆಯ ಅಂತ್ಯವೂ ನಿನ್ನಿಂದಲೇ ಮುಗಿದುಹೋಗುತ್ತಿತ್ತು. ಆದುದರಿಂದ ಕೇಳಿಕೊಳ್ಳುತ್ತಿರುವೆ ನನ್ನ ಪ್ರೀತಿಯ ಹುಡುಕಾಟವೂ ನಿನ್ನೊಂದಿಗೆ  ಮರೆತು ಹೋಗಿಬಿಡಲಿ. ಹುಚ್ಚು ಮನಸ್ಸಿನ ಪೆಚ್ಚುತನವನ್ನು ಮನ್ನಿಸು, ಆದರೆ ಒಂದು ಮಾತು. ಒಂದೇ ಒಂದು ಕ್ಷಣ ನನ್ನ ಈ ನಿನ್ನ 'ಮುದ್ದು'ನ ಸ್ವಾರ್ಥಿ ಅಂತೇನಾದ್ರೂ ನೀನಂದ್ಕೊಂಡ್ರೆ ಸತ್ತೇ ಹೋಗ್ಬಿಡ್ತೇನೆ ಅಷ್ಟೇ...  ಇನ್ನೂ ಹೆಚ್ಚು ಬರೆದ್ರೆ 'ಪುರಾಣ' ಅಂತೀಯ ಅಂತ ಗೊತ್ತು. ಸಾಕು, ಮುಗಿಸ್ತಾ ಇದೀನಿ. ನಿನ್ನೊಂದಿಗಿನ ಸೊಗಸಾದ ಬೆಸುಗೆಯನ್ನು, ನೆನೆಪಾಗಿಯಷ್ಟೇ ಉಳಿಯುತ್ತಿರುವ ನಿನ್ನ ಹಂಬಲವನ್ನು, ಕನಸುಗಳೇ ಆಗಿ ಹೋದ ನಮ್ಮ ಕಲ್ಪನೆಗಳನ್ನು ಎಲ್ಲವನ್ನೂ...
ಕೊನೆಯದಾಗಿ, ನನ್ನ ಜೀವವೆಲ್ಲಿದೆ ಗೊತ್ತಾ ನಿಂಗೆ, ನಿನ್ನ ನಗುವಿನಲ್ಲಿ, ಆ ಮಗುತನದಲ್ಲಿ... ಸೋ, ಹ್ಯಾಪಿಯಾಗಿರು ಗೆಳೆಯಾ...             

- ಮುದ್ದು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್