ದುರ್ಜನಃ ಪರಿಹತರವ್ಯಃ
ವಿದ್ಯಯೋಲಂಕೃತೋಪಿ ಸನ್
ಮಣಿನಾ ಭೂಷಿತಃ ಸರ್ಪಃ
ಕಿಮಸೌನ ಭಯಂಕರಃ ॥
ಈ ಶ್ಲೋಕದ ಅರ್ಥ ಹೀಗಿದೆ: ಮಣಿಯಿಂದ ಶೋಭಿಸುವ ಸರ್ಪವು ನೋಡಲು ಸುಂದರವಾಗಿ ಕಂಡರೂ, ನಮ್ಮಲ್ಲಿ ಭಯವನ್ನು ಹುಟ್ಟಿಸುವುದಷ್ಟೆ? ಅಂತೆಯೇ ದುರ್ಜನರಾದಂಥವರು ವಿದ್ಯಾವಂತರಾದರೂ ಸಹ ಅವರಿಂದ ನಾವು ದೂರ ಏರಬೇಕು. ಅವರನ್ನು ಉದಾಸೀನಭಾವದಿಂದ ಕಾಣಬೇಕು. ಅವರ ಸ್ನೇಹ, ಸಾಮೀಪ್ಯ ಸಲ್ಲದು.
- ಡಾ. ಕೃಷ್ಣಮೂರ್ತಿ ಶಾಸ್ತ್ರಿ