ನನ್ನ ಬಾಳಿಗೆ ನೀ ಬೆಳಕಾಗಬಹುದೆಂದುಕೊಂಡೆ
ಆದರೆ ನೀನು ಕತ್ತಲಾಗಿ
ಬೆಳಕು ಹುಡುಕುವುದು ಕಲಿಸಿಕೊಟ್ಟೆ.
=
ನಾನೂ ನೀನೂ ಪ್ರೀತಿಸುವಾಗ
ಮಳೆ ಸುರಿದಿತ್ತು
ಮನೆಗೆ ಸೇರುವ
ದಾರಿಯೇ ಮುಚ್ಚಿಹೋಗುವಂತೆ!
=
ಮನೆಮಂದಿನ ಬಾಳೆ
ನಿನ್ನನ್ನೇ ಹೋಲುವುದಲ್ಲ
ಎಂದೊಡನೆ ಬಾಳೆಯ ಮೇಲೆ
ಕುಳಿತಿದ್ದ ಚಿಟ್ಟೆ ಸುಟ್ಟುಹೋಯಿತು!
=
ನನ್ನೆದೆಯ ಮೇಲೆ ನೀ ನೆಟ್ಟುಹೋದ
ಪಾಪಾಸುಕಳ್ಳಿ ಉದುರಿಸಿದ
ಮುಳ್ಳುಗಳಿಂದ ಹತ್ತಿರ ಯಾರೂ ಸುಳಿಯುತ್ತಿಲ್ಲ <
= ಮೋಹನ್ ವಿ. ಕೊಳ್ಳೇಗಾಲ
ಮೇಷ್ಟ್ರು : ಯಾಕೋ ನಿಂಗ ಕ್ಲಾಸಿಗೆ ತಡವಾಗಿ ಬಂದೆ ?
ನಿಂಗ : ತುಂಬಾ ಮಳೆ ಸಾರ್, ರೋಡ್‌ನಲ್ಲಿ ಎಷ್ಟು ಜಾರ್ತಾ ಇತ್ತು ಅಂದ್ರೆ ನಾನು ಒಂದ್ ಸ್ಟೆಪ್ ಮುಂದಕ್ಕಿಟ್ರೆ ಎಂಟು ಸ್ಟೆಪ್ ಹಿಂದಕ್ಕೆ ಜಾರ್ತಾ ಇದ್ದೆ.
ಮೇಷ್ಟ್ರು : ಹಾಗಾದ್ರೆ ನೀನು ಬಂದಿದ್ದು ಹೇಗೆ ?
ನಿಂಗ : ಬಿಡ್ತೀನಾ ಸಾರ್, ನಾನು ಹಿಮ್ಮುಖವಾಗಿ ನಡೆದುಕೊಂಡು ಬಂದೆ.
=
'ನಾನು ನಿನ್ನ ಬಿಟ್ಟು ಬೇರಾರನ್ನೂ ಪ್ರೀತಿಸಲಿಲ್ಲವೆಂದು ಸುಳ್ಳು ಹೇಳಿ ಮದ್ವೆಯಾದೆ ಪುಟ್ಟಿ... ಸಾರಿ... ಕಣೆ...'
'ನನ್ನನ್ನೂ ನೀವು ಕ್ಷಮಿಸಬೇಕು !'
'ಯಾಕೆ ?'
'ನಾನು ಪೂಜಾರಿಗೆ ಡೈವೋರ್ಸ್ ಕೊಟ್ಟಿದ್ದನ್ನು ನಿಮ್ಮಲ್ಲಿ ಹೇಳಲಿಲ್ಲ ಅದಕ್ಕೆ !.' <
- ಎನ್. ಜ್ಞಾನಮೂರ್ತಿ