ಬಡವನಿಗೆ
ಹೊಟ್ಟೆ ಬಟ್ಟೆಯ ಚಿಂತೆ
ಧನಿಕನಿಗೆ
ಕಪ್ಪುಹಣದ ಚಿಂತೆ
ಸರ್ಕಾರಿ ನೌಕರನಿಗೆ
ಆದಾಯತೆರಿಗೆ ಉಳಿಸುವ ಚಿಂತೆ
ಮಧ್ಯಮ ವರ್ಗದವರಿಗೆ
ಕನಸುಗಳ ಕಂತೆ ಕಂತೆ!
ವಿನಾಶಕಾರಕಗಳು
ವಿನಾಶಕಾರಕಗಳು
ಹೆಣ್ಣು, ಹೊನ್ನು ಮತ್ತು ಮಣ್ಣು
ಆದರೂ ಎಲ್ಲರಿಗೂ ಈ ಮೂರರ ಮೇಲೆಯೇ ಕಣ್ಣು!
ಕೊನೆ
ವ್ಯಕ್ತಿ
ಸೇರಿರಲಿ ಯಾವುದೇ
ಜಾತಿ, ಧರ್ಮ, ಕೋಮಿಗೆ
ಸತ್ತಾಗ
ಒಯ್ಯುವುದು ಮಾತ್ರ
ರುದ್ರಭೂಮಿಗೆ!
ಬದುಕು
ಹುಟ್ಟಿದಾಗ
ಬಿದಿರಿನ ತೊಟ್ಟಿಲಲ್ಲಿಟ್ಟು
ತೂಗುತ್ತಾರೆ
ಸತ್ತಾಗ
ಬಿದಿರಿನ ಚಟ್ಟದಲ್ಲಿಟ್ಟು
ಸಾಗುತ್ತಾರೆ!
- ಡಾ.ಸಿ.ಎಂ. ಗೋವಿಂದರೆಡ್ಡಿ, ಮಾಲೂರು