ಮಕರಂದ/ದೋಣಿ

ಓದುವುದು ಯಾತನೆ, ಸ್ಫೂರ್ತಿ

ಸೂಸನ್ ಸೊಂಟಾಗ್, ಅಮೆರಿಕದ ಮಹತ್ವದ ಹಾಗೂ ಜನಪ್ರಿಯ ಲೇಖಕಿಯರಲ್ಲೊಬ್ಬಳು. ಈಕೆ ಚಿತ್ರ ನಿರ್ದೇಶಕಿ, ಚಳವಳಿಗಾರ್ತಿ ಕೂಡ. ಒಂದು ರೀತಿಯಲ್ಲಿ ನಮ್ಮ ಅರುಂಧತಿ ರಾಯ್ ಥರದವಳು ಎಂದು ಹೇಳಬಹುದಾದ ಈಕೆಯ ಕೆಲವು ಕೃತಿಗಳು: ಇನ್ ಅಮೆರಿಕ, ವೋಲ್ಕನೋ ಲವರ್, ದಿ ವೇ ವಿ ಲಿವ್ ನೌ. ಈಕೆ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಬರೆದ ಲೇಖನದ ಆಯ್ದ ಭಾಗ:
ಕಾದಂಬರಿ ಓದುವುದೊಂದು ಸಹಜ ಕ್ರಿಯೆ. ಆದರೆ ಕಾದಂಬರಿ ಬರೆಯುವುದು ಮಾತ್ರ ವಿಚಿತ್ರ ಹವ್ಯಾಸ. ಓದುವುದು ಕಲೆ. ಅದಕ್ಕೆ ಹೋಲಿಸಿದರೆ, ಬರೆಯುವುದು ನಿಮ್ಮ ಸಂಪೂರ್ಣ ಗಮನ ಮತ್ತು ತೀವ್ರತೆಯನ್ನು ಅವಲಂಬಿಸಿದ ಪರಿಶ್ರಮ. ಬರೆಯುವುದು ಯಾಕೆಂದರೆ ನಾವು ಓದಿ ಮೆಚ್ಚುವುದಕ್ಕೆಂದೇ. ಆದರೆ ಯಾವತ್ತೂ ನಮಗೆ ನಾವೇ ಹಾಗೆ ಮೆಚ್ಚಿಗೆ ಗಳಿಸಿಕೊಳ್ಳಲಿಕ್ಕಾಗುವುದಿಲ್ಲ. ಆದ್ದರಿಂದ ಮತ್ತೆ ಅದನ್ನು ತಿದ್ದಿ ಬರೆಯಬೇಕಾಗುತ್ತದೆ. ಮತ್ತೆ ಓದು, ಮತ್ತೆ ತಿದ್ದು. ಇದನ್ನು ಮರುಕಳಿಸಬೇಕಾಗುತ್ತದೆ. 'ಬರೆಯುವುದೆಂದರೆ ನಮ್ಮ ಬಗ್ಗೆ ನಾವೇ ತೀರ್ಪು ಕೊಟ್ಟುಕೊಳ್ಳುವ ಸ್ಥಾನದಲ್ಲಿ ಕುಳಿತಂತೆ' ಎಂದು ಒಮ್ಮೆ ಹೆನ್ರಿಕ್ ಇಬ್ಸನ್ ಹೇಳಿದ್ದ. ಪರಿಶ್ರಮವಿಲ್ಲದೆ ಬರೆದದ್ದನ್ನು ಓದುವುದರಲ್ಲಿ ಹಿತವೂ ಇಲ್ಲ.
ಸಾಮಾನ್ಯವಾಗಿ, ಬರೆಯುವಿಕೆಯನ್ನು ಓದುವಿಕೆ ಹತ್ತಿಕ್ಕುತ್ತದೆ. ಓದುವ ಪ್ರೀತಿಯೇ ನಿಮ್ಮನ್ನು ಬರಹಗಾರನಾಗಿಸುವ ಕನಸಿಗೆ ದೂಡುತ್ತದೆ. ಆದರೆ ಓದುವಿಕೆಯಿಂದ ಬರೆಯುವ ಚಟವೂ ಕೆಲವೊಮ್ಮೆ ಸತ್ತುಹೋಗುತ್ತದೆ. ನೀವು ಬರಹಗಾರನಾಗಿ ಸ್ಥಾಪಿತರಾಗಿಬಿಟ್ಟ ಮೇಲಂತೂ, ಇನ್ನೊಬ್ಬರು ಬರೆದದ್ದನ್ನು ಓದುವುದು ಹಾಗೂ ಕ್ಲಾಸಿಕ್‌ಗಳನ್ನು ಮರಳಿ ಓದುವುದು ಒಂದು ಹಿಂಸೆ, ಯಾತನೆ... ಹಾಗೆಯೇ- ಸ್ಫೂರ್ತಿ.
ಎಲ್ಲ ಖ್ಯಾತ ಬರಹಗಾರರೂ ಇದನ್ನು ಒಪ್ಪಲಾರರು. ನಾನೊಮ್ಮೆ ವಿ.ಎಸ್.ನೈಪಾಲ್ ಅವರನ್ನು ಭೇಟಿಯಾದಾಗ, ಖ್ಯಾತ ಕ್ಲಾಸಿಕ್ ಇಂಗ್ಲಿಷ್ ಕಾದಂಬರಿಯೊಂದರ ಬಗ್ಗೆ ಮಾತನಾಡಿದ್ದೆ. ಅವರು ಓದನ್ನು ಓದಿರಬಹುದೆಂದು ನಾನು ಭಾವಿಸಿದ್ದೆ. ಆದರೆ ಅವರು ಓದಿರಲಿಲ್ಲ. ನನ್ನ ಮುಖದ ಮೇಲಿನ ಆಶ್ಚರ್ಯವನ್ನು ಗಮನಿಸಿ ಅವರು ಹೇಳಿದರು: ಸೂಸನ್, ನಾನು ಲೇಖಕ. ಓದುಗನಲ್ಲ!

-ಹರೀಶ್ ಕೇರ
harishkera@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

ಹೆದ್ದಾರಿ ದಾಟುತ್ತಿದ್ದ ಕುರಿ-ಮೇಕೆಗಳ ಮೇಲೆ ಹರಿದ ಟ್ರಕ್; 23 ಕುರಿ, 2 ಮೇಕೆ ಸಾವು, ಭೀಕರ ವಿಡಿಯೋ ಸಿಸಿಟಿವಿಯಲ್ಲಿ ಸೆರೆ!

ಚಿಂತಾಮಣಿಯ Dictator, ನಿನ್ನ ವಿರುದ್ಧ ಸಮರ ನಿರಂತರ: ಎಂಸಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೆ ಕಿಡಿ

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!