ಮಕರಂದ/ದೋಣಿ

ಸುಖದುಃಖಗಳನ್ನು ಪರಸ್ಪರ ಸಮನಾಗಿ

ಸುಖದುಃಖಗಳನ್ನು ಪರಸ್ಪರ ಸಮನಾಗಿ ಹಂಚಿಕೊಳ್ಳೋಣವೆಂದು ಆ ಪ್ರೇಮಿಗಳು ಆಣೆ-ಪ್ರಮಾಣ ಮಾಡಿದ್ದರು. ಮತ್ತು ಅಂತೆಯೇ ನಡೆದುಕೊಂಡರು. ಸಿರಿವಂತನನ್ನು ಮದುವೆಯಾಗಿ ಅವಳು ತನ್ನ ಪಾಲಿನ ಸುಖವನ್ನು ಕೊಂಡೊಯ್ದಳು ಮತ್ತು ಜನ್ಮಪೂರ್ತಿ ಆಗುವಷ್ಟು ದುಃಖವನ್ನು ಈತನ ಪಾಲಿಗೆ ಬಿಟ್ಟುಹೋದಳು!

ಪ್ರತಿಯೊಂದು ಓಟಿಗೂ ಸಾವಿರಾರು ರೂ.ಗಳನ್ನು 'ಜನರಿಗಾಗಿ' ಹಂಚಿದ. ಗೆದ್ದು ಬಂದು ಮಂತ್ರಿಯೂ ಆದ. ಮುಂದೆ ಸರ್ಕಾರದ ಉಚಿತ ಸವಲತ್ತುಗಳನ್ನು ದೊರಕಿಸಿಕೊಡಲು ಅದೇ 'ಜನರಿಂದ' ಲಕ್ಷಾಂತರ ರೂ.ಗಳನ್ನು ವಸೂಲಿ ಮಾಡಿದ. "ಜನರಿಂದ, ಜನರಿಗಾಗಿ ಇರುವುದೇ ಪ್ರಜಾಪ್ರಭುತ್ವ" ಎಂಬ ವ್ಯಾಖ್ಯೆಯು ಪಕಪಕ ನಗುತ್ತಿತ್ತು!

ಮನೆಗೆ ಹೊಸ ಕಾರು ಬಂದ ಖುಷಿಯಲ್ಲಿ ಸಾರಾಯಿ ಅಂಗಡಿ ಮಾಲೀಕನ ಕುಟುಂಬ ಸಂಭ್ರಮಿಸುತ್ತಿತ್ತು. ಅದೇ ಬೀದಿಯ ಕೊನೆಯ ಮನೆಯೊಂದು, ಕುಡಿತಕ್ಕೆ ಬಲಿಯಾಗಿ ಕುಟುಂಬದ ಹಿರಿ ಜೀವವನ್ನೇ ಕಳೆದುಕೊಂಡ ಸೂತಕದಲ್ಲಿತ್ತು.

ಆತ್ಮಹತ್ಯೆ ಮಾಡಿಕೊಳ್ಳಲೆಂದು ರೈಲು ಕಂಬಿಯ ಮೇಲೆ ತಲೆಯಿಟ್ಟು ಮಲಗಿದ್ದ ಈತ, ಪಕ್ಕದ ಹಳಿಯಲ್ಲಿ ಇದೇ ಪ್ರಯತ್ನದಲ್ಲಿದ್ದ ಸುಂದರ ಯುವತಿಯನ್ನು ನೋಡಿದ. ಅವರದೀಗ ಸುಖೀ ಸಂಸಾರ.

ಆ ಪ್ರೇಮಿಗಳು ಎಷ್ಟೇ ಗೋಗರೆದರೂ ಹುಡುಗಿಯ ತಂದೆ ತಾಯಿ ಅವರ ಮದುವೆಗೆ ಒಪ್ಪಲಿಲ್ಲ. ಬಡವನೆಂಬ ಕಾರಣಕ್ಕೆ ಹುಡುಗನನ್ನು ಓದ್ದೋಡಿಸಿದರು. ಕೆಲದಿನಗಳ ತರುವಾಯ ಅವರೇ ಆ ಯುವಕನಲ್ಲಿ ಹೋಗಿ, ತಮ್ಮ ಮಗಳನ್ನು ಮದುವೆಯಾಗೆಂದು ಕಾಲು ಹಿಡಿದರು. ಮೂರು ವರ್ಷದ ಪ್ರೀತಿಯಿಂದ ಸಾಧ್ಯವಾಗದ್ದು, ಮಗಳ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮೂರು ತಿಂಗಳ ಮಗುವಿನಿಂದ ಸಾಧ್ಯವಾಗಿತ್ತು!

-ಸಂತೋಷಕುಮಾರ್ ಸಂಪಗಾವಿ, ಬೆಳಗಾವಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಜೆಪಿ ಪ್ರತಿಭಟನೆ: ಮೆಟ್ರೋ, ಇಂಟರ್ನೆಟ್ ಸೇವೆ ಸ್ಥಗಿತ, ಅಕ್ರಮ ಬಂಧನಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್; ಕೇಂದ್ರಕ್ಕೆ ಸೂಚನೆ

'ಸತ್ತ ಮೇಲೂ ಕಾಡ್ತಿದ್ದಾನೆ'; ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಲ್ಲೂ ನಾನಾ ಪಾಟೇಕರ್ ಹೆಸರು ಎಳೆತಂದ ತನುಶ್ರೀ ದತ್ತಾ; ನೆಟ್ಟಿಗರ ಆಕ್ರೋಶ!

ನನ್ನ ಕನಸು ನೀವೇ ಸರ್‌; ನಿಮ್ಮ ಕಣ್ಣಲ್ಲಿ ನೀರು ತರಿಸಿದೆ: ಕಿಚ್ಚ ಸುದೀಪ್ ಮುಂದೆ ಕಣ್ಣೀರಿಟ್ಟ ಮಾಡರ್ನ್ ಮಹಾಕವಿ ಮಂಜು

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ