ನಗಬೇಕು
ಮರಿತಿಮ್ಮ : ಒಬ್ಬ ಸ್ಟೂಡೆಂಟ್ ಬ್ರಿಲಿಯಂಟ್ ಮತ್ತು ಫೇಲ್ ಆಗಲು ಕಾರಣ ಏನು?
ಮರಿಗುಂಡ : ಬ್ರಿಲಿಯಂಟ್ ಸ್ಟೂಡೆಂಟ್ ಆಗಲು ಕಾರಣ ಬ್ರಿಲಿಯಂಟ್ ಟೀಚರ್...
ಮರಿತಿಮ್ಮ : ಮತ್ತೆ ಸ್ಟೂಡೆಂಟ್ ಫೇಲ್ ಆಗಲು ಕಾರಣ?
ಮರಿಗುಂಡ : ಬ್ಯೂಟಿಫುಲ್ ಟೀಚರ್..
---
ಗುಂಡ : ಒಳ್ಳೆಯ ಸೋಪ್ ಯಾವುದು ಇದೆ ?
ಅಂಗಡಿಯವ : ಸಾರ್, ಒಳ್ಳೆ ಸೋಪ್ ಅಂದ್ರೆ ಮೈಸೂರು ಸ್ಯಾಂಡಲ್ ಇದೆ.
ಗುಂಡ : ಅದರಲ್ಲಿ ಕೈ ತೊಳೆದುಕೊಂಡು... ಕಾಲು ಕೆ.ಜಿ ಬೆಲ್ಲ ಕೊಡು.
---
ಮಗ : ಅಮ್ಮಾ.. ಈ ರೆಡ್ ಪಟಾಕಿ ಹೊಡೆದರೆ ಜಾಸ್ತಿ ಸೌಂಡ್ ಬರುತ್ತಲ್ಲಮ್ಮಾ..
ತಾಯಿ : ಅಯ್ಯೋ ರಾಮಾ... ಅದು ಸಿಲಿಂಡರ್ ಕಣೋ... ಹೋಗೋ ಆಚೆ..
---
ಗುಂಡಿ : ಪುಟ್ಟಾ.. ಆಂಟಿಗೆ ಕಿಸ್ ಕೊಡು.. ಅವ್ರು ಇಂದು ಊರಿಗೆ ಹೋಗ್ತಾ ಇದ್ದಾರೆ...
ಮರಿಗುಂಡ : ಇಲ್ಲಾ ನಾನು ಕೊಡೊಲ್ಲಾ..
ಗುಂಡಿ : ಯಾಕೋ?
ಮರಿಗುಂಡ : ನಿನ್ನೆ ಅಪ್ಪ ಕೊಡೋಕೆ ಹೋದಾಗ.. ಆಂಟಿ ಕೆನ್ನೆಗೆ ಹೊಡೆದಿದ್ರು ಗೊತ್ತಾ..
---
ಗುಂಡಿ : ನಿಮ್ಮ ಮನೆಯ ಅಡುಗೆ ಸೂಪರ್..
ತಿಮ್ಮಿ : ಥ್ಯಾಂಕ್ಯೂ..
ಗುಂಡಿ : ಅಂಥಾ ಸೂಪರ್ ಅಡುಗೆ ಮಾಡಿದ ಕೈಗಳಿಗೆ ಚಿನ್ನದ ಬಳೆ ತೊಡಿಸಬೇಕು..
ತಿಮ್ಮಿ : ಬೇಡಾರೀ.. ನನ್ನ ಗಂಡ ಬಳೆ ತೊಡೊಲ್ಲಾ..
---
ಒಬ್ಬ ಹುಡುಗ ಹೆಣ್ಣು ನೋಡಲು ಅವಳ ಮನೆಗೆ ಹೋಗುತ್ತಾನೆ.. ಆಗ ನಡೆದ ಮಾತುಕತೆ ಇದು.
ಹುಡುಗ : ನೀನು ಏನು ಓದಿದ್ದೀಯಾ ?
ಹುಡುಗಿ : ಬಿಎ
ಹುಡುಗ : ಅಯ್ಯೋ.. ಬರೀ ಎರಡೇ ಅಕ್ಷರನಾ.. ನಾನು ನಾಲ್ಕು ಅಕ್ಷರದ ತನಕ ಓದಿದ್ದೇನೆ..
ಹುಡುಗಿ : ಏನು ಓದಿದ್ದೀರಾ ?
ಹುಡುಗ : ಎಸ್ಎಸ್ಎಲ್ಸಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.