ನ್ಯಾನೋ ಕಥೆಗಳು
ಭೂಮಿಯ ಮೇಲಿದ್ದ ಗಿಡ ಮರಗಳನ್ನು ಕಡಿದು 'ಪರಿಸರ ನಾಶ' ಮಾಡಿದ ಜನರು ಮಳೆಗಾಗಿ ಪ್ರಾರ್ಥಿಸಿ ಕತ್ತೆಗಳ ಮದುವೆ ಮಾಡಿಸುತ್ತಿದ್ದರು !
ಬೇರೆ ಬೇರೆ ಪಕ್ಷದಲ್ಲಿ ಚುನಾವಣೆಗೆ ನಿಂತಿದ್ದ ಇಬ್ಬರು ವ್ಯಕ್ತಿಗಳು ಚುನಾವಣಾ ಸಮಯದಲ್ಲಿ, ತಮ್ಮ ಹಿಂಬಾಲಕರ ಮೂಲಕ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದ ಊರ ಜನರಲ್ಲಿ ದ್ವೇಷದ ಕಿಡಿ ಹತ್ತಿಸಿ ಪರಸ್ಪರ ಕಿತ್ತಾಡುವಂತೆ ಮಾಡಿದರು. ಫಲಿತಾಂಶದ ಬಳಿಕ ಇಬ್ಬರೂ ಒಂದಾದರು. ಆದರೆ ಊರ ಜನರ ದ್ವೇಷವು ಮಾತ್ರ ಮುಂದುವರೆದೇ ಇದೆ.
'ಗೆಲ್ಲೋದು ಹೇಗೆ' ಎಂಬ ಪುಸ್ತಕ ಬರೆದು ಅಪಾರ ಹಣ ಗಳಿಸಿದ ವ್ಯಕ್ತಿ, ಚುನಾವಣೆಗೆ ಸ್ಪರ್ದಿಸಿ ಠೇವಣಿ ಕಳೆದುಕೊಂಡನು !!
ಶ್ರಮ ಹಾಕಿ ಜೀವನ ನಡೆಸಲು ಬಯಸದ ವ್ಯಕ್ತಿಯೊಬ್ಬ, ಮತ್ತೊಬ್ಬರ ಭವಿಷ್ಯ ಹೇಳುವ ಕಾಯಕವನ್ನು ಸ್ವೀಕರಿಸಿ, ತನ್ನ ಭವಿಷ್ಯವನ್ನು ಉಜ್ವಲವಾಗಿಸಿಕೊಂಡನು !
-ಬಸವನಗೌಡ ಹೆಬ್ಬಳಗೆರೆ