ನಿನ್ನ ಪ್ರೀತಿಯ
ಬೆಚ್ಚನೆ ಸ್ಪರ್ಶಕೆ
ಕರಗಿದ ಮಂಜು ನಾ
ತೊಟ್ಟಿಕ್ಕುವ
ನಿನ್ನ ಕಣ್ಣಂಚಲಿ
ನನ್ನ ಬಿಂಬ
ನಾ ಕಂಡೆ ಪ್ರೀತಿಯ
ಅದರ ತುಂಬ
ಮೌನ ತುಂಬಿದ ಪ್ರೀತಿ
ಉಸಿರ ಬೆಸುಗೆಯ ರೀತಿ
ನಿನ್ನೊಡಲಿನ
ಕೂಸು ನಾ
ಬೊಗಸೆಯ ನೀಡಿರುವೆ
ಪ್ರೀತಿಯ ಸವಿಜೇನ
ನೀಡುವೆಯಾ
ಮಿಡಿಯುವ ರೆಪ್ಪೆಗಳ
ನಡುವೆ ಬಚ್ಚಿಟ್ಟುಕೊಂಡ
ನಿನ್ನ ಬಟ್ಟಲು ಕಣ್ಣುಗಳು
ನನ್ನ ಮೇಲಿನ ಪ್ರೀತಿಯ
ಹೊರ ಸೂಸುತ್ತಿವೆ
ನಾ ಕ್ಷಣಕಾಲ ದಂಗಾದೆ
ನೀ ಮೌನದಿ
ನನ್ನ ಕೊಲ್ಲುವ ರೀತಿಗೆ
ಮಾತಿನ ಪ್ರೀತಿಗೆ
- ಕಾವೇರಿ ಎಸ್.ಎಸ್.
ಸಕಲೇಶಪುರ