ಮಕರಂದ/ದೋಣಿ

ಅವನ ಕುಂಚ

ಆಗೋಡೆಗಳಿಗವನ ಕುಂಚ ತಾಗಿತ್ತು
ಚಿತ್ರಗಳ ಹೊಸ ಲೋಕ ಸೃಷ್ಟಿಯಾಗಿತ್ತು!

ನದಿ ನೀರು ಕಡು ನೀಲಿ ಕಡಲ ಬಣ್ಣವು ಕೆಂಪು,
ಬಗೆಬಗೆಯ ಹೂಗಳಲು ಬಣ್ಣಗಳದೇ ಕಂಪು!
ಬಣ್ಣ ಬಣ್ಣದ ಬೀಜ ಬಿತ್ತಿಬೆಳೆದನು ಬೆಳೆಯ
ಮೋಡಗಳು ಸುರಿಸಿದವು ರಂಗು ರಂಗಿನ ಮಳೆಯ
ಚಿತ್ರದಲೆ ಚೈತ್ರವದು ಕಳೆಗಟ್ಟತೊಡಗಿತ್ತು,
ಆ ಗೋಡೆಗಳಿಗವನ ಕುಂಚ ತಾಗಿತ್ತು!

ಹುಲಿಯ ಚಿತ್ರದ ಬಲಕೆ ಕೇಕೆ ಹಾಕುವ ಜಿಂಕೆ,
ಮೊಸಳೆ ಹತ್ತಿರ ನಿಂತು ಹುಲ್ಲು ತಿನ್ನುವ ಮೇಕೆ!
ಪಕ್ಕದಲೇ ಓಡಿದವು ಬಸ್ಸು, ಬೈಕು, ಕಾರು
ಆ ಊರ ಗೋಡೆಯಲಿ ಅವನೂರಿನಾ ತೇರು...
ವರ್ಣವಾತಾವರಣ ಹುಚ್ಚೆದ್ದು ಹಾಡಿತ್ತು,
ಆ ಗೋಡೆಗಳಿಗವನ ಕುಂಚ ತಾಗಿತ್ತು!

ಚಂದ್ರಮನ ಚಿತ್ರವದು ಮುಂಜಾನೆ ಬಿಸಿಲಲ್ಲಿ,
ತಾರೆಗಳು ಮಿನುಗಿದವು ಕಣ್ಕುಕ್ಕೋ ಬೆಳಕಲ್ಲಿ!
ಹೆದರದಲೆ ಹಾರಿದವು ಹಕ್ಕಿಗಳು ಕಣ್ಮುಚ್ಚಿ,
ಬಿಸಿಲಲ್ಲೇ ಕುಣಿದಿತ್ತು ನವಿಲದುವು ಗರಿಬಿಚ್ಚಿ!
ಬಣ್ಣಗಳ ಮೆರವಣಿಗೆ ಭರದಿಂದ ಸಾಗಿತ್ತು,
ಆ ಗೋಡೆಗಳಿಗವನ ಕುಂಚ ತಾಗಿತ್ತು...

ಮುರುಭೂಮಿ ಮೇಲೆಲ್ಲ ಸುರಿದಿತ್ತು ಮೇಘ
ಭೋರ್ಗರೆವ ಸದ್ದಲ್ಲ...ಬರಿ ವರ್ಣರಾಗ!
ಬರಡು ನೆಲ ಬಸಿರಾಯ್ತು ಮಳೆ ಹನಿಗಳ ಹೊತ್ತು
ಹಗುರಾಯ್ತು ಮರುಘಳಿಗೆ ಹತ್ತು ಗಿಡಗಳ ಹೆತ್ತು!
ಕಲ್ಲ ಕ್ಯಾನ್ವಾಸಿನಲೇ ಹಸಿರು ಹುಟ್ಟಿತ್ತು,
ಆ ಗೋಡೆಗಳಿಗವನ ಕುಂಚ ತಾಗಿತ್ತು...

ಕಲ್ಲ ಹಾಸಿನ ಮೇಲೆ ಇಬ್ಬನಿಯ ಮಣಿಮಾಲೆ
ಇಬ್ಬನಿಯ ಒಡಲಲ್ಲಿ? ಸೂರ್ಯಕಿರಣದ ಜ್ವಾಲೆ
ಕಾಮನಾ ಬಿಲ್ಲಾಯ್ತು ಭೂತಾಯಿಯಾ ಓಲೆ
ಆಗದಸಿ ಹಾಕಿದನು ಹಕ್ಕಿಗಳ ರಂಗೋಲೆ
ಸ್ವರ್ಗದಾ ಹಾದಿಯದು ರೇಖೆಯಲೆ ಮೂಡಿತ್ತು...
ಆ ಗೋಡೆಗಳಿಗವನ ಕುಂಚ ತಾಗಿತ್ತು!

 -ರಾಘವೇಂದ್ರ ಆಚಾರ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP