ಬದುಕಿದ್ದಾಗಲೇ ಶ್ರಾದ್ಧ ಆಗುತ್ತಾ?
ಶ್ರಾದ್ಧ ಸತ್ತ ಮೇಲೆ ಮಾಡೋದಾ? ಬದುಕಿದ್ದಾಗಲೇ ಮಾಡೋದಾ? ಬಹುಶಃ ಇವೆರಡು ದ್ವಂದ್ವ ಪ್ರಶ್ನೆಗಳು ಹುಟ್ಟಿದ್ದು ಬೆಳಗೆರೆ ಕೃಷ್ಣಶಾಸ್ತ್ರಿ...
ಶ್ರಾದ್ಧ ಸತ್ತ ಮೇಲೆ ಮಾಡೋದಾ? ಬದುಕಿದ್ದಾಗಲೇ ಮಾಡೋದಾ? ಬಹುಶಃ ಇವೆರಡು ದ್ವಂದ್ವ ಪ್ರಶ್ನೆಗಳು ಹುಟ್ಟಿದ್ದು ಬೆಳಗೆರೆ ಕೃಷ್ಣಶಾಸ್ತ್ರಿಗಳ ತಂದೆ ಚಂದ್ರಶೇಖರ ಶಾಸ್ತ್ರಿಗಳು ಮಡಿಯುವಾಗ. ಇನ್ನೇನು ಚಂದ್ರಶೇಖರ ಶಾಸ್ತ್ರಿಗಳ ಪ್ರಾಣ ಹಾರಿಹೋಗುವುದರಲ್ಲಿತ್ತು. ಆಗ ಅವರು ಮಗನೆದುರು ಈ ಮಾತುಗಳನ್ನು ಪೋಣಿಸಿಟ್ಟರು, 'ಇನ್ನು ಈ ಶರೀರದ ಕಥೆ ಮುಗೀತು. ತೆಗೆದುಕೊಂಡು ಹೋಗಿ ಸುಟ್ಟು ಹಾಕು. ಸಾಲ ಮಾಡಿ ಶ್ರಾದ್ಧ ಮಾಡಬೇಡ. ಎರಡು ವರ್ಷ ನೀನು ನನ್ನ ಸೇವೆ ಮಾಡಿದ್ದೀಯಲ್ಲ... ನನ್ನ ಶ್ರಾದ್ಧ ಮಾಡಿದಂತಾಯ್ತು. ಇನ್ನು ತಾಯ್ನೆಲದ ಋಣ ತೀರಿಸಲು ಒಂದು ಶಾಲೆ ತೆರೆದು ಮಕ್ಕಳಿಗೆ ವಿದ್ಯೆ ಕೊಡು. ಜತೆಗೆ ಅನ್ನವನ್ನೂ ಹಾಕು'. ಈಗ ಹೇಳಿ ಶ್ರಾದ್ಧ ಯಾವಾಗ ಮಾಡೋದು?
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.