ಹನಿಹನಿ
ನೀನು ಅತ್ತರೆ
ನನ್ನ ಕಣ್ಣು
ಕಡಲು
=
ನೀನು ತೆರೆದ ಬಾಗಿಲು
ತೆರೆದೇ ಇದೆ;
ನೀನೇ ಇಲ್ಲದ ಮೇಲೆ
ಮುಚ್ಚಲು ಏನಿದೆ?
=
ಅವಳ ನೆನಪಾಯ್ತು
ಆಗತಾನೆ ಮಳೆಗೆ ತೊಯ್ದ
ಮರದ ಕೆಳಗೆ ನಿಂತೆ.
=
ನಿನಗೆ ಕೇಳಲೆಂದೇ ಅಳುತ್ತಿರುವೆ.
ನೀನು ನೋಡಲೆಂದೇ ಬೀಳುತ್ತಿರುವೆ.
ನೀನಾದರೋ ಕಲ್ಲು ಮೂರ್ತಿ!
=
ಬಿರುಗಾಳಿಯಾಗಿಯಾದರೂ ಬಾ
ಉದುರಿ ಹೋಗಲಿ
ಹಳೆಯ ನೆನಪುಗಳೆಲ್ಲಾ
ಚಿಂತೆಯಿಲ್ಲ;
ನಿಲ್ಲುತ್ತೇನೆ ಹೀಗೆಯೇ
ಬೋಳು ಮರವಾಗಿ!
- ಹರಿನಾಥ ಬಾಬು ವಿ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.