ಮಕರಂದ/ದೋಣಿ

ನಗಬೇಕು...

ಒಂದು ದೊಡ್ಡ ಜಮಖಾನೆಯ ಮೇಲೆ ಏಳು ಮಂದಿ ಸನ್ಯಾಸಿಗಳು ಕುಳಿತಿದ್ದರು. ಈ ಪೈಕಿ ಒಬ್ಬ ಸನ್ಯಾಸಿಯ ಗಮನ ಸೆಳೆದ ತರುಣನೊಬ್ಬ ಹೇಳಿದ: 'ಸ್ವಾಮಿ, ನನ್ನ ಹುಡುಗಿ ಕೈ ಕೊಟ್ಟಳು. ಈಗ ನಾನು ಏನು ಮಾಡಬೇಕು? ಹೇಳಿ...'
ಆ ಸಾಧು ತಕ್ಷಣವೇ ಹೇಳಿದ: 'ವತ್ಸಾ, ಒಂದು ಚಿಕ್ಕ ಜಮಖಾನೆ ತಂದು, ನಮ್ಮ ಜೊತೆಗೇ ಕುಳಿತುಕೊ.
---
ಬರೀ  ಗೃಹಿಣಿಯರೇ ಪ್ರವಾಸ ಹೊರಟಿದ್ದರು. ದುರಾದೃಷ್ಟವಶಾತ್ ಮಾರ್ಗಮಧ್ಯೆ ಅವರಿದ್ದ ಬಸ್ಸು ಕಂದಕಕ್ಕೆ ಉರುಳಿ ಬಿತ್ತು. ಎಲ್ಲರೂ ಸ್ಥಳದಲ್ಲೇ ಮೃತಪಟ್ಟರು. ಈ ದುರಂತದಿಂದ ದಿಗ್ಭ್ರಮೆಗೊಂಡ ಗೃಹಿಣಿಯರ ಗಂಡಂದಿರೆಲ್ಲ ಒಂದು ವಾರದವರೆಗೆ ಶೋಕ ಆಚರಿಸಿದರು. ಈ ಘಟನೆ ನಡೆದು ಒಂದೂವರೆ ತಿಂಗಳು ಕಳೆದು ಹೋದ ನಂತರವೂ ಗುಂಡ ಪ್ರತಿ ದಿನ ಸಂಜೆ ಒಂದು ಕಡೆ ಕೂತು ಗೊಳೋ ಎಂದು ಅಳುತ್ತಿದ್ದ. ಅದನ್ನು ಕಂಡ ಹಿರಿಯರೊಬ್ಬರು ಹೇಳಿದರು; ಸಮಾಧಾನ ಮಾಡಿಕೊಳ್ಳಪ್ಪಾ...
ಗುಂಡ ತಕ್ಷಣವೇ ಹೇಳಿದ: ನನ್ನ ಹೆಂಡತಿ ಟೂರ್‌ಗೆ ಹೋಗಲೇ ಇಲ್ಲ ಸ್ವಾಮೀ, ಹೇಗೆ ಸಮಾಧಾನ ಮಾಡಿಕೊಳ್ಳೋದು ಹೇಳಿ...
---
ಪೋಲಿ ಗೆಳೆಯರ ಗುಂಪು ಬಾರ್‌ಗೆ ಬಂದಿತ್ತು. ಕಿಕ್ ಏರುತ್ತಿದ್ದಂತೆಯೇ ಒಬ್ಬ ಪ್ರಶ್ನೆ ಹಾಕಿದ. ಕೋಳಿ ಮೊದಲೋ ಮೊಟ್ಟ ಮೊದಲೋ?
ಎಲ್ಲರಿಗಿಂತ ಮೊದಲೇ ಗುಂಡ ಹೀಗೆ ಉತ್ತರಿಸಿದ: ನಾವು ಯಾವುದನ್ನು ಮೊದಲು ಆರ್ಡರ್ ಮಾಡ್ತೀವೋ ಅದೇ ಮೊದಲು ಬರ್ತದೆ...
---
ಊಟ ಬಿಟ್ಟವನು, ನಿದ್ದೆ ಬಿಟ್ಟವನು ಮಾತು ಬಿಟ್ಟವನು, ಕುಳಿತಲ್ಲೇ ಕುಳಿತವನು... ಇಂಥ ಗುಣ ಹೊಂದಿದವನನ್ನು ಹಿಂದೆ ಸನ್ಯಾಸಿ ಅನ್ನುತ್ತಿದ್ದರು. ಈಗ, ಸಾಫ್ಟ್‌ವೇರ್ ಎಂಜಿನಿಯರ್ ಅನ್ನುತ್ತಾರೆ!
---
ಗರ್ಲ್ ಫ್ರೆಂಡ್‌ಗೂ, ಹೆಂಡತಿಗೂ ಇರುವ ವ್ಯತ್ಯಾಸವೇನು?
ಯಾವುದೇ ಪ್ರಶ್ನೆ ಕೇಳಿದರೂ ಗರ್ಲ್ ಫ್ರೆಂಡ್ ಉತ್ತರ ಕೊಡುತ್ತಾಳೆ. ಆದ್ರೆ ಹೆಂಡತಿ- ನೀವು ಏನೇ ಉತ್ತರ ಹೇಳಿದ್ರೂ ಅವರ ಹಿಂದೇನೇ ಒಂದು ಪ್ರಶ್ನೆ ಕೇಳ್ತಾಳೆ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!