ಮಕರಂದ/ದೋಣಿನ್ಯಾನೋ ಕಥೆಗಳು
Updated On : 4 Sept 2013, 4:03 am
- ಒಬ್ಬ ಸೂರ್ಯನ ಜನನಕ್ಕೆ ಕೋಟಿ ಇಬ್ಬನಿ ಹನಿಗಳು ಸಾವನ್ನಪ್ಪಿದವು!
- ಮದುವೆ ಮಂಟಪದಲ್ಲಿ ಉಂಡೆದ್ದವರ ಎಲೆಗಳಲ್ಲಿ ಚಲ್ಲಾಡಿದ ಭಾರೀ ಭೋಜನ, ಬಡವನ ಹಸಿವನ್ನು ಅಣಕಿಸುತ್ತಿದೆ.
- ಶಬರಿಯಂತೆ ಅವನಿಗಾಗಿ ಕಾಯುತ್ತಾ ಕುಳಿತವಳ ತಲೆಯಲ್ಲೀಗ ನೆರೆಗೂದಲು!
- ಕ್ಯಾಲೆಂಡರ್ ಬದಲಾಯಿತು, ಬದುಕಿನ್ನೂ ಹಾಗೇ ಇದೆ!
- ಮದುವೆಗಳು ಸ್ವರ್ಗದಲ್ಲಿ ನಿಶ್ಚಯಿಸಿರುತ್ತವಂತೆ!? ಮನೆಯಲ್ಲಿ ಮದುವೆಗೆ ಒಪ್ಪದ ಕಾರಣ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡರು. ಈಗ ಸ್ವರ್ಗದಲ್ಲಿ ಅವರ ಮದುವೆ, ಮಿಲನ ಇತ್ಯಾದಿ...
- ಅವನು ಅವಳ ಕೆನ್ನೆಗೆ ಮುತ್ತಿಡುವ ಕ್ಷಣ, ಮನೆ ಮುಂದಿನ ಮಲ್ಲಿಗೆ ಗಿಡದಲ್ಲಿ ಮೊಗ್ಗೊಂದು ಅರಳಿ, ಗಾಳಿಯ ಜೊತೆ ಸುಗಂಧ ಪಸರಿಸಿತು !
- ಮನೆಯ ಕಳ್ಳತನಕ್ಕೆಂದು ಬಂದವನ ಮನಸನ್ನು ಆ ಮನೆಯ ಯಜಮಾನನ ಮಗಳು ಕದ್ದುಬಿಟ್ಟಳು !
- ನೀರಿಗಾಗಿ ಬಿಂದಿಗೆ ಹಿಡಿದು ಸಾಲುಗಟ್ಟಿ ನಿಂತ ಜನರನ್ನು ನೋಡಿದ ಸಹೃದಯಿ ಮೋಡವೊಂದು ಬಾನಿನಿಂದ ಜಿಗಿಯಿತು !
- ಚಲಿಸುತ್ತಿದ್ದ ಬಸ್ಸನ್ನು ಹತ್ತಲು ಓಡುತ್ತಿದ್ದವನನ್ನು ಆಂಬುಲೆನ್ಸ್ ಹೊತ್ತೊಯ್ಯಿತು !