ಪುಟ್ಟ: ಅಮ್ಮ ಅಮ್ಮ, ನಿನ್ನ ತಲೆಯಲ್ಲಿ ಬಿಳಿ ಕೂದಲು ಯಾಕೆ ಆಗುತ್ತಿದೆ?
ಈ ಪ್ರಶ್ನೆ ಕೇಳಿ ಕ್ಷಣ ಏನು ಹೇಳಬೇಕೆಂದು ಅಮ್ಮನಿಗೆ ತಿಳಿಯದಿದ್ದರೂ, ಈ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಮಗನ ತುಂಟತನ ನಿಯಂತ್ರಣದಲ್ಲಿ ಇಡಬೇಕೆಂದು ಒಂದು ನಿರ್ಧಾರಕ್ಕೆ ಬಂದು ಹೇಳಿದಳು. ಇನ್ನೇನು ಮತ್ತೆ? ನೀನು ಮಾಡೋ ತುಂಟತನ ನೋಡಿ ನೋಡಿ, ಬೇಜಾರಾಗಿ, ಚಿಂತೆ ಜಾಸ್ತಿಯಾಗಿ, ತಲೆಯಲ್ಲಿನ ಕೂದಲೆಲ್ಲ ಬಿಳಿಯಾಗಲು ಪ್ರಾರಂಭಿಸಿದೆ. ಈಗಲಾದರೂ ಗೊತ್ತಾಯ್ತಲ್ಲ? ಅಮ್ಮನ ತಲೆಗೂದಲು ಬಿಳಿಯಾಗಬಾರದಿದ್ದರೆ ನೀನು ತುಂಟತನ ನಿಲ್ಲಿಸಲೇಬೇಕು, ಗೊತ್ತಾಯ್ತಾ?
ಪುಟ್ಟ: ಹೀಗೋ ಸಮಾಚಾರ, ಅಜ್ಜಿಯ ತಲೆ ತುಂಬ ಬಿಳಿ ಕೂದಲು ಯಾಕಾಗಿದೆ ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿತ್ತು ಬಿಡು!
======
ಕೋಪದಿಂದ ಕುದಿಯುತ್ತಿದ್ದ ಪಮ್ಮಿ ಗಂಡನ ತಲೆಯ ಮೇಲೆ ಸೌಟಿನಿಂದ ಕುಟ್ಟಿ, 'ರೀ ಯಾರ್ರಿ ಇವ್ಳು ರಾಗಿಣಿ? ಈ ಚೀಟಿಯಲ್ಲಿ ಆಕೆಯ ಹೆಸರು ಬರೆದಿತ್ತು' ಎಂದಳು.
ಗಂಡ: ಡಾರ್ಲಿಂಗ್, ಕೋಪ ಯಾಕೆ ಮಾಡ್ಕೋತೀಯಾ? ನಿನ್ನೆ ರೇಸ್ಗೆ ಹೋಗಿದ್ದೆನಲ್ಲ, ಅಲ್ಲಿ ಪೋನಿಟೇಲ್... ಅಂದ್ರೆ ರೇಸಲ್ಲಿ ಗೆದ್ದ ಕುದುರೆಯ ಹೆಸರೇ ರಾಗಿಣಿ.
ಮರುದಿನ ಪಮ್ಮಿ ಗಂಡನ ತಲೆಯ ಮೇಲೆ ಸೌಟಿನಿಂದ ಮತ್ತೆ ಕುಟ್ಟಿ ಹೇಳುತ್ತಾಳೆ: 'ರೀ, ನಿಮ್ಮ ರೇಸಿಂಗ್ ಕುದುರೆ ಫೋನ್ ಮಾಡಿದೆ!
======
ಗಂಡ ಹೆಂಡತಿಯಿಬ್ಬರೂ ಎರಡನೇ ಹನಿಮೂನಿಗೆಂದು ಹೋಟೆಲ್ ಮಧುಚಂದ್ರಕ್ಕೆ ಹೋಗುತ್ತಾರೆ. ಆಗ ಎದುರಾದ ಮಹಿಳೆಯೊಬ್ಬಳು ಹಲೋ ಎಂದಳು.
'ರೀ, ಯಾರ್ರಿ ಅವಳು?' ಹೆಂಡತಿಗೆ ಭಾರಿ ದಿಗಿಲು.
'ಲೇ, ಮೊದಲೇ ನನ್ನ ತಲೆ ಕೆಟ್ಟಿದೆ, ಅವಳೂ ಇದೇ ಪ್ರಶ್ನೆ ಕೇಳ್ತಾಳಂತ ಹೆದರಿಬಿಟ್ಟಿದ್ದೆ. ನೀನೂ ಇದೇ ಪ್ರಶ್ನೆ ಕೇಳಿ ನನ್ನ ತಲೇನ ಮತ್ತಷ್ಟು ಕೆಡಿಸಬೇಡ!
======
ಒಂದು ತುಂಡು ಬಟ್ಟೆಯನ್ನೂ ಧರಿಸದೇ ವಿವಸ್ತ್ರಳಾಗಿ ಛಾಯಾಚಿತ್ರಗ್ರಾಹಕನಿಗೆ ಫೋಸ್ ಕೊಟ್ಟಿರುವುದಾಗಿ ಪತ್ರಿಕೆಯಲ್ಲಿ ಬಂದ ಸುದ್ದಿಯನ್ನು ನಿರಾಕರಿಸಿದ ಬಿಚ್ಚಮ್ಮ ಎಂದೇ ಖ್ಯಾತಳಾದ ಚಿತ್ರ ನಟಿ ಕೊಟ್ಟ ಕ್ಲಾರಿಫಿಕೇಷನ್ ಏನು ಗೊತ್ತಾ?
'ನಾನು ಖಂಡಿತಾ ವಿವಸ್ತ್ರಳಾಗಿರಲಿಲ್ಲ. ಆಗ ನನ್ನ ತಲೆಗೆ ಒಂದು ಸ್ಕಾರ್ಫ್ ಕಟ್ಟಿಕೊಂಡಿದ್ದೆ. ಸ್ಕಾರ್ಫ್ ಕೂಡ ವಸ್ತ್ರವೇ ಆದ್ದರಿಂದ ನಾನು ವಿವಸ್ತ್ರಳಾಗಿರಲು ಹೇಗೆ ಸಾಧ್ಯ?'