ನಿಶ್ಚಿತಾರ್ಥ ಮುಗಿದ ಮರುದಿನ ಗಂಡು ಮತ್ತು ಹೆಣ್ಣು ದೂರವಾಣಿಯ ಮುಖಾಂತರ ಮಾತುಕತೆಯಲ್ಲಿ ತೊಡಗಿರುತ್ತಾರೆ. ಲೈಸೆನ್ಸ್ ಸಿಕ್ಕಾದ ಮೇಲೆ ಇನ್ನೇನು? ಮಾತುಗಳಲ್ಲಿ ಪ್ರೀತಿ, ತುಂಟಾಟ, ರಮಿಸುವುದು ತುಂಬಿ ಹರಿಯುತ್ತಿರುತ್ತದೆ. ಇಬ್ಬರಲ್ಲಿಯೂ ಅದೇನೋ ಪುಳಕ. ಮನಸ್ಸಿಗೆ ಬಂದಿದ್ದೆಲ್ಲ ಮಾತನಾಡುವ ತವಕ... ಅವರ ಮಾತುಗಳು ಹೀಗಿವೆ.
ಗಂಡು: ಈ ದಿನಕ್ಕೋಸ್ಕರ ಎಷ್ಟು ದಿನದಿಂದ ನಾನು ಕಾಯ್ತಾ ಇದ್ದೆ. ಗೊತ್ತಾ?
ಹೆಣ್ಣು: ನೀನು ನನ್ನ ಬಿಟ್ಟು ಹೋಗುವುದಿಲ್ಲ ತಾನೆ?
ಗಂಡು: ಕನಸಲ್ಲಿ ಕೂಡ ಅಂಥ ಕೆಲಸ ಮಾಡಲ್ಲ.
ಹೆಣ್ಣು: ನೀನು ನನ್ನ ಪ್ರೀತಿಸುತ್ತಿಯಲ್ಲ?
ಗಂಡು: ಆಫ್ ಕೋರ್ಸ್, ಇಂದು ಮಾತ್ರ ಅಲ್ಲ ಎಂದೆಂದಿಗೂ.
ಹೆಣ್ಣು: ನೀನು ನನ್ನ ಮರೆತುಬಿಡಲ್ಲ ತಾನೆ?
ಗಂಡು: ಎಲ್ಲಾದ್ರೂ ಉಂಟೆ, ಅದಕ್ಕಿಂತ ಸಾಯುವುದೇ ಮೇಲೆ.
ಹೆಣ್ಣು: ಹಾಗಾದ್ರೆ, ನನಗೊಂದು ಮುತ್ತು ಕೊಡ್ತೀಯಾ ಪ್ಲೀಸ್?
ಗಂಡು: ಕೇಳಬೇಕಾ? ಅದಕ್ಕಿಂತ ಸಂತೋಷದ ಸಂಗತಿ ಇನ್ನೇನಿದೆ?
ಹೆಣ್ಣು: ನೀನು ನನ್ನ ಹೊಡೆಯಲ್ಲ ತಾನೆ?
ಗಂಡು: ಆ ತರಹ ತಪ್ಪು ಜೀವಮಾನದಲ್ಲಿ ಎಂದೂ ಮಾಡುವುದಿಲ್ಲ.
ಹೆಣ್ಣು: ನೀನು ಕೊನೆಯವರೆಗೂ ನನ್ನ ಜೊತೆಯಲ್ಲಿಯೇ ಇರ್ತೀಯ ತಾನೆ?
ನನನ
ಅದೇ ಗಂಡು ಹೆಣ್ಣಿನ ದಾಂಪತ್ಯಕ್ಕೆ 10 ವರ್ಷ ಆಗುತ್ತದೆ. ಆ ಸಂದರ್ಭದಲ್ಲಿ, ಒಂದು ದಿನ ಜಗಳವಾಡಿಕೊಂಡು ಅವಳೊಂದು ದಿಕ್ಕಿಗೆ, ಇವನೊಂದು ದಿಕ್ಕಿಗೆ ಹೋಗಿರುತ್ತಾರೆ. ಆ ಸಂದರ್ಭದಲ್ಲಿ ಅವರ ಮಧ್ಯೆ ನಡೆವ ಫೋನ್ ಸಂಭಾಷಣೆ ಹೇಗಿರುತ್ತೆ ಎಂಬುದನ್ನೂ ತಿಳಿಯುವ ಆಸೆ ತಾನೆ? ಈಗ ಕೆಳಗಿನಿಂದ ಮೇಲಕ್ಕೆ ಓದಿಕೊಂಡು ಹೋಗಿ...