ನಗಬೇಕಮ್ಮಾ ನಗಬೇಕು...
ಸರ್ದಾರ್ಜಿ: ನಾನು ನಿನ್ನನ್ನು ಪ್ರೀತಿಸುತ್ತೇನೆ, ನಾವಿಬ್ಬರೂ ಮದುವೆಯಾಗೋಣವೇ ?
ಕಾವ್ಯ: ನನಗೂ ನಿಮ್ಮನ್ನು ಮದುವೆಯಾಗೋದಕ್ಕೆ ಇಷ್ಟವಿದೆ. ಆದರೆ ಏನ್ ಮಾಡೋದು? ನಾನು ನಿಮಗಿಂತಲೂ ಒಂದು ವರ್ಷ ದೊಡ್ಡವಳು... ನನಗೀಗ 28 ವರ್ಷ !
ಸರ್ದಾರ್ಜಿ: ಯೋಚನೆ ಮಾಡಬೇಡ, ಎರಡು ವರ್ಷದ ನಂತರ ಮದುವೆಯಾಗೋಣ, ಆಗ ನನಗೆ 30 ವರ್ಷ ಆಗುತ್ತೆ !
--
ಸರ್ದಾರ್ಜಿ: ರೀ, ಇಲ್ಲಿ ರಾಮರಾಯರ ಮನೆ ಎಲ್ಲಿದೆ ?
ಇನ್ನೊಬ್ಬ ಸರ್ದಾರ್ಜಿ: ಅದು ಶ್ಯಾಮರಾಯರ ಮನೆಯ ಎದುರಿಗಿದೆ.
ಸರ್ದಾರ್ಜಿ : ಶ್ಯಾಮರಾಯರ ಮನೆ ಎಲ್ಲಿದೆ ?
ಇನ್ನೊಬ್ಬ ಸರ್ದಾರ್ಜಿ: ಶ್ಯಾಮರಾಯರ ಮನೆ ರಾಮರಾಯರ ಮನೆ ಎದುರಿಗಿದೆ.
ಸರ್ದಾರ್ಜಿ : ಹೌದಾ? ಹಾಗಾದ್ರೆ ಇವೆರಡೂ ಎಲ್ಲಿವೆ ?
ಇನ್ನೊಬ್ಬ ಸರ್ದಾರ್ಜಿ: ಇವೆರಡೂ ಎದುರು ಬದುರಿಗಿವೆ.!
--
ಡಾಕ್ಟರ್ : ತಮ್ಮ ನೆಚ್ಚಿನ ನಟನ ಆರೋಗ್ಯ ವಿಚಾರಿಸಲು ಬಂದಿದ್ದ ಲಕ್ಷಾಂತರ ಜನರನ್ನ ಹೇಗೆ ಚದುರಿಸಿದಿರಿ ? ಪೊಲೀಸರಿಂದಲೇ ಸಾಧ್ಯವಾಗದ ಕೆಲಸವನ್ನು ನೀವು ಮಾಡಿದ್ದಾದ್ರೂ ಹ್ಯಾಗೆ ರೀ ?
ಸರ್ದಾರ್ಜಿ : ತುಂಬಾ ಸಿಂಪಲ್ ಸಾರ್. ಒಂದು ದೊಡ್ಡ ಬಾಕ್ಸ್ ಹಿಡ್ಕೊಂಡು ಜನರ ಬಳಿ ಹೋಗಿ ಚಿತ್ರನಟನ ಆಪರೇಷನ್‌ಗೆ ದುಡ್ಡು ಕಡಿಮೆಯಾಗಿದೆ. ಎಲ್ಲಿ, ಎಲ್ಲಾರೂ ತಲಾ ನೂರು ರೂ. ಕೊಡಿ ಅಂದೆ. ಜನರೆಲ್ಲ ಚದುರಿ ಬಿಟ್ರು !
--
ನಿರ್ದೇಶಕ: ನಾನು ಹೊಸದಾಗಿ ನಿರ್ದೇಶಿಸಲಿರುವ ಸಿನಿಮಾ ಏಳು ವಾರ ಓಡೋದು ಗ್ಯಾರಂಟಿ
ಪತ್ರಕರ್ತ: ಅಂದರೆ.... ಭಾನುವಾರದಿಂದ ಶನಿವಾರದವರೆಗಾ ಸಾರ್ ?
--
75 ವರ್ಷದ ವೃದ್ಧ ನಾಲ್ಕನೇ ಮದುವೆಗೆ ಸಿದ್ಧತೆ ನಡೆಸಿದ್ದ. ತಾತನ ಈ ನಿರ್ಧಾರದಿಂದ ಬೇಸತ್ತ ಮೊಮ್ಮಗ ಧೈರ್ಯ ಮಾಡಿ ಹೇಳಿದ.
'ತಾತಾ, ನೀವು ಮದುವೆ ಆಗ್ತಿರೋ ಹುಡುಗಿಗೆ ಕೇವಲ 21 ವರ್ಷ. ಈ ವಯಸ್ಸಿನಲ್ಲಿ ನೀವು ಮದುವೆ ಆಗೋದು ತರವಲ್ಲ. ನಿಮ್ಮ ದಾಂಪತ್ಯ ದುರಂತದಲ್ಲಿ ಕೊನೆಯಾಗಬಹುದು ಎಚ್ಚರ!'
ತಾತ ಉತ್ತರ ಕೊಟ್ಟ: ನಾನು ಅದಕ್ಕೆಲ್ಲಾ ಹೆದರಲ್ಲ. ಅವಳು ಸತ್ತರೆ ಮತ್ತೊಂದು ಮದುವೆ ಆಗೇ ಆಗ್ತೀನಿ.
ನೆತ್ತರು ಮಾತಾಡಿತು!
ಅವನು ಅವಳ ಗರ್ಭವನ್ನು ಗುರಿಯಾಗಿಸಿಕೊಂಡು ಜಾಡಿಸಿ ಒದೆಯುತ್ತಿದ್ದ. ಅವಳು ತಪ್ಪಿಸಿಕೊಂಡು ಅರಚುತ್ತಲೇ ಇದ್ದಳು. 'ಬರೀ ಒಂದು ವರ್ಷ ಇಷ್ಟು ಅನ್ನ ಹಾಕಿಬಿಡು. ಅವರಿವರ ತೆಕ್ಕೆಯ ಬೆವರಿಗೆ ಹೊಟ್ಟೆ ತೊಳಸುತ್ತದೆ'. ಹಾಗೆ ಅವಳು ಅರಚುತ್ತಲೇ ಇರುವಂತೆ, ನೆತ್ತರ ಹನಿ ಅವಳ ತೊಡೆಗಳನ್ನು ಸುಡುತ್ತಾ ಇಳಿದು ನೆಲದಲ್ಲಿ ಹೆಪ್ಪಾಯಿತು. ಅದನ್ನೇ ದಿಕ್ಕೆಟ್ಟು ನೋಡುತ್ತಾ ಆಕೆ ಮತ್ತಷ್ಟು ಜೋರಾಗಿ ಬಿಕ್ಕಿಬಿಕ್ಕಿ ಅತ್ತಳು.
ಆಗ, ನೆತ್ತರು ಹೇಳಿತು - 'ಅಮ್ಮಾ,,, ಅಳಬೇಡಮ್ಮಾ... ಅಳಬೇಡಾ...'
= ದೀಪಾ ಗಿರೀಶ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.