ಗಾದೆಗೆ ಗುದ್ದು...!
ಮುಖವು ಮನಸಿನ ಕನ್ನಡಿ
ಮೂತಿ ಮರುಳಗೆ ಮುನ್ನುಡಿ.
ಮುಖ ನೋಡಿಯೇ ಮಣೆ ಇಡಿ!
ಊರಿಗೆ ಬಾರದವಳು ನೀರಿಗೆ ಬಾರಳೇ?
ನೀರೇ ಬಾರದ ಊರ ಹಳೇ ನಲ್ಲಿಗೆ
ನಾರಿ ಬರುವಳೇ ನೀರಿಗೆ?
ಒಲ್ಲದ ಗಂಡನಿಗೆ ಮೊಸರಿನಲಿ ಕಲ್ಲು
ಸಲ್ಲುವ ಗಂಡನಿಗೆ ನೀರು ಕುಡಿಸಿದರೂ
ತಪ್ಪಲಿಲ್ಲ, ಕಿಡ್ನಿಯಲ್ಲಿ ಕಲ್ಲು!
ಮಾತು ಬಲ್ಲವ ಮಾಣಿಕ್ಯ ತಂದ
ಮಾಣಿಕ್ಯ ಅಡವಿಟ್ಟು ಮೌನ ಬಂಗಾರವ
ಕೊಂಡುಬಂದ!
ಗುಣ ನೋಡಿ ಹೆಣ್ಣು ಕೊಡಿ
ಹಣವಿರದೇ, ಬರಿದೇ ಗುಣ
ಇರುವವನ ವಿಷಯ ಕೈಬಿಡಿ!
ಮುತ್ತು ಕಳೆದರೆ ಸಿಕ್ಕೀತು; ಹೊತ್ತು ಕಳೆದರೆ ಸಿಕ್ಕೀತೆ?
ಕೂಡಿದಾಗಲೂ ಸಿಗದ ಮುತ್ತು
ಕಳೆದಾಗ ಸಿಕ್ಕೀತೇ?
ಮಾತು ಬೆಳ್ಳಿ ಮೌನ ಬಂಗಾರ
ತುಟಿಯೊಡೆದು ಉದುರುವ
ಮಾತಿಗಿಂತಲೂ ಅಧರ ಬೆಸೆದು ಅರಳುವ
ಪ್ರೀತಿ ಮಧುರ, ಮಾತು ಬೆಳ್ಳಿ, ಮೌನ ಬಂಗಾರ
ಹಾಳೂರಿನಲಿ ಉಳಿದವನೇ ಗೌಡ
ಹಾಳೂರಿನಲಿ ಉಳಿದವನಿಗೇ ಗೌಡನ ಪಟ್ಟ,
ಹಾಳುಗೆಡಿಸಿದ ಪಾಪಿ ಹಳೇ ಗೌಡ ಊರು ಬಿಟ್ಟ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.