ನಗಬೇಕು
ಗುಂಡನ ಮಗ: ಅಪ್ಪಾ..... ನೆಲದ ಮೇಲೆ ನೂರು ಮತ್ತು ಐನೂರು ರೂಪಾಯಿ ನೋಟು ಬಿದ್ದಿದ್ದರೆ, ಯಾವುದು ತಗೋತಿಯಾ?
ಗುಂಡ: ಆಫ್ಕೋರ್ಸ್, ಐನೂರು ರುಪಾಯಿ ನೋಟು ಕಣೋ..
ಗುಂಡನ ಮಗ: ಎಂಥ ಸ್ಟುಪಿಡ್ ಅಪ್ಪಾ ನೀನು? ಎರಡೂ ನೋಟು ಯಾಕೆ ತಗೋಬಾರ್ದು?
ಮಾಲೀಕ: ಹಳೇ ಕಂಪೆನಿಯಲ್ಲಿ ಎಷ್ಟು ಸಮಯ ಕೆಲಸ ಮಾಡಿದ್ದೀಯಾ?
ಗುಂಡ: 30 ವರ್ಷ
ಮಾಲೀಕ: ನಿನ್ನ ವಯಸ್ಸೆಷ್ಟು?
ಗುಂಡ: 25 ವರ್ಷ
ಮಾಲೀಕ: ಅರೇ......ಅರೇ.. ಅದು ಹೇಗೆ ಸಾಧ್ಯ? ನಿನಗೆ 25 ವರ್ಷ, ಅನುಭವ 30 ವರ್ಷ?!
ಗುಂಡ: ಹೌದು ಸಾರ್... ಅಲ್ಲಿ ಓವರ್ ಟೈಂ ಮಾಡುತ್ತಿದ್ದೆ!
ಜೀವನದಲ್ಲಿ ಜಿಗುಪ್ಸೆಗೊಂಡ ಗುಂಡ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ರೇಲ್ವೆ ಹಳಿ ಕಡೆ ಹೆಜ್ಜೆ ಹಾಕುತ್ತಾನೆ. ಹೋಗುವಾಗ ಚಿಕನ್ ಬಿರಿಯಾನಿ ಮತ್ತು ಒಂದು ಕ್ವಾಟರ್ ವಿಸ್ಕಿ ಒಯ್ಯುತ್ತಾನೆ. ಇದನ್ನು ನೋಡಿದ ದಾರಿಹೋಕ, 'ಯಾಕೆ ಇದನ್ನೆಲ್ಲಾ ತೆಗೆದುಕೊಂಡು ಹೋಗ್ತಾ ಇದ್ದೀಯಾ?' ಎಂದು ತಡೆದಾಗ ಗುಂಡ ಹೇಳ್ತಾನೆ... 'ಈ ಟ್ರೈನ್ ಏನಾದ್ರೂ ಲೇಟಾಗಿ ಬಂದು ಹೊಟ್ಟೆ ಹಸಿವಿನಿಂದ ನಾನ್ ಸತ್ರೆ ಏನಪ್ಪಾ ಮಾಡ್ಲಿ..?'.
ಗುಂಡ: ರಾತ್ರಿ ಇಡೀ ಟ್ರೈನ್ನಲ್ಲಿ ನಿದ್ದೇನೆ ಬಂದಿಲ್ಲ ಗುರು....
ತಿಮ್ಮ: ಯಾಕಪ್ಪಾ?
ಗುಂಡ: ಟ್ರೈನ್ನಲ್ಲಿ ನಂದು ಅಪ್ಪರ್ ಬರ್ತ್.
ತಿಮ್ಮ: ನಿದ್ದೆ ಬಂದಿಲ್ಲಾಂದರೆ ಸೀಟ್ ಚೇಂಜ್ ಮಾಡಬೇಕಿತ್ತು.
ಗುಂಡ: ಚೇಂಜ್ ಮಾಡೋಕೆ ಲೋಯರ್ಬರ್ತ್ನಲ್ಲಿ ಯಾರೂ ಇರಲಿಲ್ಲ ಮಾರಾಯ! <
ಕಲ್ಲೊಂದು
ಶಿಲೆಯಾದಾಗಲಷ್ಟೇ
ಉಳಿಗೆ ಉಳಿಗಾಲ!
ನನ್ನ
ಕಣ್ಣೊಳಗೆ ನಿನ್ನ
ನಾಚಿದ ಕೆನ್ನೆಯ
ಕೆಂಪಿದೆ!
ಉದುರುವ ತರಗೆಲೆಯ
ನೋಡಿ ಚಿಗುರು
ನಕ್ಕಿದೆ!
ಅಳು ನಿಲ್ಲಿಸಿದೆ
ಬರೆವ ಲೇಖನಿಯೂ,
ಹೃದಯವೂ!
ಹಾಳೆಯ ಎದೆಗೊರಗಿದ
ಅಕ್ಷರಗಳ ಕಣ್ಣೂ
ಒದ್ದೆ!
ಕತ್ತಲೆಯ ಕಂಡು
ಹಸಿದ ದೀಪದ ಬಾಯಲ್ಲಿ
ನೀರೂರಿದೆ!
ಕಣ್ಣುಗಳ ಸ್ಪರ್ಧೆಯಲ್ಲಿ
ಸೋತದ್ದು ಮಾತ್ರ
ಹೃದಯ!
-ಸಂತೋಷ್ ಕುಮಾರ್ ಎಲ್.ಎಂ.