ಮಕರಂದ/ದೋಣಿ

ನನ್ನವನ ಮನಕ್ಕೆ ಕನ್ನ ಹಾಕಿರೋ ಸುಂದರಿ!

ಅಬ್ಬಾ! ಅದೆಂಥಾ  ಮೈಮಾಟ ಈಕೆಯದ್ದು! ಬ್ರಹ್ಮನೆಂಬ ಚತುರ ಕುಸುರಿಯವ ಬಹಳ ತಾಳ್ಮೆಯಿಂದ ವರ್ಷಗಟ್ಟಲೆ ಕುಳಿತು ಸೃಷ್ಟಿಸಿದಂತೆ ಇದ್ದಾಳೆ ಕಣ್ರೀ.. ಗೋಧಿ ಮೈಬಣ್ಣವಾದ್ರೂ ಎಂಥವರೂ ಮನಸೋಲುವಂಥಾ ಧ್ವನಿ ಈಕೆಯದ್ದು. ಇವಳ ಒನಪು, ವೈಯ್ಯಾರ, ಸ್ವರ ಮಾಧುರ್ಯಕ್ಕೆ ಅಲ್ವೆ ನನ್ನಾತ ಈಕೆಯಲ್ಲಿ ಅನುರಕ್ತನಾಗಿದ್ದು..?
ನನ್ನಾತ ಎಂಜಿನಿಯರು. ಬೆಳಗ್ಗಿಂದ ಸಂಜೆಯವರೆಗೂ, ಸ್ಸಾರಿ ರಾತ್ರಿಯವರೆಗೂ ಆಫೀಸು. ಮನೆಗೆ ಬಂದ ಮೇಲೂ ಆಫೀಸ್ ಕೆಲ್ಸ ಮುಂದುವರಿಯುತ್ತೆ. ಇತ್ತೀಚೆಗಂತೂ ಮೀಟಿಂಗ್ ಅದೂ-ಇದೂ ಅಂತ ಇವ್ನು ಮನೆಗೆ ತಲುಪೋದೇ ಒಂಬತ್ತೋ ಹತ್ತೋ ಗಂಟೆ. ನಮ್ಮಿಬ್ರ ಊಟ ಆದ್ಮೇಲೆ ಒಂದರ್ಧ ಗಂಟೆಯಾದ್ರೂ ನನ್ನಾತನಿಗೆ ಅವಳೊಂದಿಗೆ ಸಮಯ ಕಳೆಯದಿದ್ರೆ ಮನಸಿಗೆ ನೆಮ್ಮದಿಯಿಲ್ಲ.
ಇಷ್ಟೇ ಅಲ್ಲ, ಬೆಳಗ್ಗೆ ಎದ್ದ ಕೂಡಲೇ ಅವಳ ಬಳಿಗೋಡ್ತಾನೆ. ನನ್ನ ತಿರುಗಿಯೂ ನೋಡಲ್ಲ ಅಂತೀನಿ.... ಅಯ್ಯೋ, ವಿಕೇಂಡ್ ಬಂದ್ರಂತೂ ಕೇಳೋದೆ ಬೇಡ. ಸಮಯ ಸಿಕ್ಕಾಗೆಲ್ಲ ಅವ್ಳೊಂದಿಗೇ ಇದ್ದು ಬಿಡ್ತಾನೆ. ನೀನು ನನ್ ಜೊತೆಗೆ ಬೇಕಾದಷ್ಟು ಹರಟೋ, ಆಕೆಯೇ ಯಾಕೆ ಬೇಕು ಅಂತ ನಾ ಕೇಳಿದ್ರೆ, 'ಅವ್ಳು ನಿನ್ನ ಹಾಗೆ ಯಾವುದೋ ಸಮಯದಲ್ಲಿ ಬಂದು ಮುದ್ದು ಮಾಡು, ಶಾಪಿಂಗ್ ಕರ್ಕೊಂಡೋಗು ಅಂತೆಲ್ಲ ಪೀಡ್ಸಲ್ಲ. ನನ್ನ ಫ್ರೀ ಟೈಮ್‌ಗಾಗಿ ಕಾಯ್ತಾಳೆ. ನಂಗೆ ಬೇಕಾದ ಹಾಗೆ ನಾನು ನುಡಿಸಿದಂತೆ ಇಂಪಾಗಿ ನುಡೀತಾಳೆ. ಅದ್ಕೆ ಅವ್ಳೆ ನಂಗಿಷ್ಟ ಕಣೇ..., ಅಂದು ಬಿಟ್ಟ.
ಆದ್ರೆ, ಅವಳೊಂದಿಗೆ ಮಾತಾಡುವಾಗ ವಿಷಯಾಂತರವಾದ್ರೆ ಅಥವಾ ತಾಪ್ಪಾದ್ರೆ ಆಕೆಯ ಇಂಪಾದ ಮೆಲುದನಿ ಕರ್ಕಶವಾಗಿಬಿಡುತ್ತೆ. ಹಾಗಾದಾಗೆಲ್ಲ ಇವನು ತನ್ನ ತಪ್ಪು ತಿದ್ಕೊಂಡು ಮತ್ತೆ ಮಾತಿಗಿಳೀತಾನೆ. ನನ್ನ ಮುಂದೆಯೇ ಅವ್ಳನ್ನು ಎದೆಗೊತ್ತಿ, ತನ್ನ ಹೆಗಲ ಮೇಲೆ ಆಕೆಯ ತಲೆಯಿರಿಸಿ, ಆಕೆಯ ಇನಿದನಿಗೆ ಕಿವಿಯಾಗ್ತಾನೆ... ನನ್ನೆದುರೇ ಇಷ್ಟೆಲ್ಲ ನಡೀತ ಇರ್ಬೆಕಾದ್ರೆ ನನ್ನ ಹೊಟ್ಟೆ ಉರೀಯದಿರುತ್ತಾ ನೀವೇ ಹೇಳಿ.... ಅಂದಹಾಗೆ, ಇಷ್ಟೆಲ್ಲ ಆದ್ರೂ ನಾನ್ಯಾಕೆ ಇನ್ನೂ ಸುಮ್ನಿದ್ದೀನಿ ಅಂತ ಯೋಚಿಸ್ತಿದ್ದೀರಾ? ಸ್ಸಾರಿ, ನಾನಿನ್ನೂ ಅವಳ ಬಗ್ಗೆ ಪೂರ್ತಿ ಹೇಳೇ ಇಲ್ಲ ನಿಮ್ಗೆ! ಅವ್ಳು ನಾನು ವೇದಿಕೆಯ ಮೇಲೆ ಹಾಡುವಾಗ ನನ್ನ ಪಕ್ಕದಲ್ಲೇ ಇದ್ದು ನಂಗೆ ಸಾಥ್ ನೀಡೋ ಪಾಶ್ಚಾತ್ಯ ಸುಂದರಿ ವಯೋಲಿನ್ ಕಣ್ರೀ!
= ಅಶ್ವಿನಿ ಪಿ.ಆರ್.
ಸಂಜಯ್ ನಗರ., ಬೆಂಗಳೂರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ: 'ಸ್ಟಿಂಗ್ ಆಪರೇಷನ್' ಕುರಿತು ಸಿಎಂ DKS ಎಚ್ಚರಿಕೆ ಕರೆಗೆ ಸಚಿವರಿಂದ ಬೆಂಬಲ

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಬಿಗ್ ಶಾಕ್‌; ಇಬ್ಬರಿಗೂ ಕೋರ್ಟ್ ಸಮನ್ಸ್

ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಅಖಿಲೇಶ್ ಯಾದವ್'ಗೆ ಬಿಗ್ ಶಾಕ್; BJP ಸೇರಲಿದ್ದಾರೆ SPಯ ಮೂವರು ಶಾಸಕರು!

ಜಿಎಸ್‌ಟಿ ಮಂಡಳಿಯಿಂದ ಪ್ರಕ್ರಿಯೆ ಸುಧಾರಣೆಗಳಿಗೆ ಅನುಮೋದನೆ; ಬಂಧನದ ಅಧಿಕಾರಕ್ಕೆ ಕಡಿವಾಣ!