ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮಕರಂದ/ದೋಣಿ

ನನ್ನ ಕೊಡುಗೆ ಇಬ್ಬರು ಮಕ್ಕಳು

Lingaraj Badiger
Updated On : 17 Jun 2014, 3:19 am

ಶಿವರಾಮ ಕಾರಂತರಿಗೆ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಿದ್ದ ಸಂದರ್ಭ. ಆಗ ದಾವಣಗೆರೆಯ ಕಾಲೇಜೊಂದರಲ್ಲಿ ಕಾರಂತರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ತುಂಬ ಅದ್ದೂರಿಯಾಗಿ ನಡೆಯಿತು. ಪ್ರೇಕ್ಷಕರು ಪ್ರಚಂಡ ಕರತಾಡನದ ಮೂಲಕ ಕಾರಂತರ ಭಾಷಣಕ್ಕೆ ಮೆಚ್ಚುಗೆ ಸೂಚಿಸಿದರು.
ಆನಂತರದಲ್ಲಿ, ಕಾಲೇಜಿನ ಪ್ರಾಚಾರ್ಯರು ಹಾಗೂ ಅಧ್ಯಾಪಕರು ಕಾರಂತರೊಂದಿಗೆ ಮಾತಿಗೆ ಕುಳಿತರು. ಕಾರಂತರಿಗೆ ವಿಜ್ಞಾನದ ಬಗ್ಗೆ ಇದ್ದ ಆಸಕ್ತಿಯನ್ನು ಅರಿತಿದ್ದ ಪ್ರಾಣಿಶಾಸ್ತ್ರ ವಿಭಾಗದ ಅಧ್ಯಾಪಕರು- ಸರ್, ವಾಟ್ ಈಸ್ ಇವರ್ ಕಂಟ್ರಿಬ್ಯುಷನ್ ಟು ಡಾರ್ವಿನ್ಸ್ ಥಿಯರಿ ಆಫ್ ಇವಲ್ಯುಷನ್? (ಸರ್, ಡಾರ್ವಿನ್‌ನ ವಿಕಾಸವಾದಕ್ಕೆ ನಿಮ್ಮ ಕೊಡುಗೆ ಏನು?) ಎಂದು ಕೇಳಿದರಂತೆ. ತಕ್ಷಣವೇ ಕಾರಂತರು-ಡಾರ್ವಿನ್‌ನ ವಿಕಾಸವಾದಕ್ಕೆ ನನ್ನ ಕೊಡುಗೆ-ಇಬ್ಬರು ಮಕ್ಕಳು ಎಂದು ಉತ್ತರಿಸಿದರಂತೆ!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement