ಉಪ್ಪು: ಸಮುದ್ರದಲ್ಲಿ ಮತ್ತು ಟೂಥ್ಪೇಸ್ಟ್ನಲ್ಲಿ ಸಿಗುವಂಥದ್ದು.
ಬೆವರು: ಸಾಮಾನ್ಯವಾಗಿ ಶ್ರಮಿಕರಲ್ಲಿ ಕಾಣಿಸುವಂಥದ್ದು. ಬೇಸಿಗೆಯಲ್ಲಿ ಸೋಮಾರಿಗಳಲ್ಲೂ ಕಾಣಿಸಿಕೊಳ್ಳುತ್ತದೆ.
ಸ್ವಾಮೀಜಿ: ಮಠದಲ್ಲಿ, ಬಿಗ್ಬಾಸ್ನಲ್ಲಿ ಕಾಣಿಸಿಕೊಳ್ಳುವವರು.
ಆಟೋ ಡ್ರೈವರ್: ಮೀಟರ್ ಉಳ್ಳಂಥ ವ್ಯಕ್ತಿ.
ಚಟ: ಬೆಂಕಿ ಉರಿಯುವಾಗ ಬರುವ ಸದ್ದು (ಚಟ ಚಟ).
ಅನುಭವಿ: ತುಂಬಾ ತಪ್ಪುಗಳನ್ನು ಮಾಡಿದವ.
ತಂದೆ: ಪ್ರಕೃತಿಯೇ ಕೊಟ್ಟ ಎಟಿಎಂ.
ಕ್ರಿಮಿನಲ್: ಕ್ರಿಮಿ ಕೀಟಗಳಾದರೂ ಕೈಗೆ ಸಿಕ್ಕಾವು, ಈತ ಸಿಗನು.
ಗುಟ್ಟು: ಒಬ್ಬರ ಹತ್ತಿರ ಮಾತ್ರ ಹೇಳುವಂಥದ್ದು. ಅವರು ಮತ್ತೊಬ್ಬರಿಗೆ ಹೇಳುವಂಥದ್ದು.