ಮತದಾರರನ್ನು ಕಾಡುವ ಮೂರು ಮುಖ್ಯ ಪ್ರಶ್ನೆಗಳು ಯಾವುವು?
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ತಾಯಿ ಗರ್ಭದಿಂದ ಮಗು ಅಳುತ್ತಲೇ ಬರುವುದೇಕೆ?
- ಗರ್ಭಿಣಿಯರು ಅಷ್ಟೆಲ್ಲ ಸೀರಿಯಲ್ ನೋಡ್ತಾ ಕೂತ್ರೆ ಇನ್ನೇನಾಗುತ್ತೆ!
ಸಿ. ಅನಂತರಾವ್ ಹಿರೇಹಳ್ಳಿ, ಭರಮಸಾಗರ
ಬಳ್ಳಾರಿಯ ಸುಡು ಬಿಸಿಲಿಗೆ ಯಾವ ಪಕ್ಷಕ್ಕೆ ಮತ ಹಾಕಿದರೆ ತಂಪಾಗಬಹುದು ಸಾರ್?
- ಕೈಗೆ ಮತ ಹಾಕಿದರೆ ಟವೆಲ್‌ನಲ್ಲಾದ್ರೂ ಗಾಳಿ ಹಾಕ್ಕೋಬಹುದು!
ಸ್ವಾಮಿ ನಿರ್ಮಲ, ಉಡಿಗಾಲ
ಲವ್ ಮಾಡುವಾಗ ಐಸ್‌ಕ್ರೀಂ ಕೇಳುವ ಹುಡುಗಿ ಮದುವೆ ನಂತರ?
- ಯಾವಾಗಲೂ ಫೇಸ್‌ಕ್ರೀಂ ಕೇಳ್ತಾಳೆ!
ಓಂ ಚನ್ನೇಶ್ ಅರಬಿಳಚಿ ಕ್ಯಾಂಪ್, ಭದ್ರಾವತಿ
ಕಾಮಿ ನಿತ್ಯಾನಂದನಿಗೂ ಕಾಮಿ ಶಿವಸಾಯಿ ಬಾಬಾನಿಗೂ ವ್ಯತ್ಯಾಸವೇನು?
- ಒಬ್ಬ 'ಎನ್ನಡ', ಮತ್ತೊಬ್ಬ 'ಎಕ್ಕಡ'!
ವಿ. ಹೇಮಂತಕುಮಾರ್, ಬೆಂಗಳೂರು.
ಆಸ್ತಿಕನಿಗೂ ನಾಸ್ತಿಕನಿಗೂ ವ್ಯತ್ಯಾಸವೇನು?
- ಆಸ್ತಿಕ ದೇವರನ್ನು ಬೇಡಿಕೊಳ್ತಾನೆ, ನಾಸ್ತಿಕ ದೇವರನ್ನು ಆಡಿಕೊಳ್ತಾನೆ!
ವಿಶ್ವಸುಹೃದಯ, ದಾವಣಗೆರೆ
ತಾರೆಯರು ಬಣ್ಣದ ಜೀವನ ಬಿಟ್ಟು ರಾಜಕೀಯ ಸೇರಿದ ನಂತರ ಮುಂದೆ?
- 'ಶೋಷಕ' ನಟ-ನಟಿಯರಾಗ್ತಾರೆ!
-ಘಾಟಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.