ಮೋಹವೆಂಬ ಮಾಯೆ
ನೀನು ಮೋಹವೆಂದೆ ನಾನು ಮಾಯೆಯೆಂದೆ ಏಕೆಂದು ಹೊಳೆಯಲಿಲ್ಲ
ನೀನು ಜೀವವೆಂದೆ ನಾನು ದೇವನೆಂದೆ ಏಕೆಂದು ತಿಳಿಯಲಿಲ್ಲ.
ಮೋಹವಾಗಿ ಕಾಡಿದೆ ಮಾಯೆಯಾಗಿ ಬೇಡಿದೆ ಕಾಡಿ ಬೇಡಿ ಎಲ್ಲಿಗ್ಹೋದೆ?
ಮನವನಾವರಿಸಿದೆ ತನುವ ತುಂಬಿಕೊಂಡೆ ಏಕೆಂದು ತಿಳಿಯಲಿಲ್ಲ.
ನೀರು ಮುತ್ತಾಯಿತೆಂದೆ ಮುತ್ತು ಮೂಗುತಿಯಾಯಿತೆಂದೆ
ಮುತ್ತೊಡೆದು ಮತ್ತೆ ನೀರಾಗಲಿಲ್ಲವೇಕೆಂದು ತಿಳಿಯಲಿಲ್ಲ.
ಬೆಂಕಿಯಲ್ಲಿ ಶಾಖವಿದೆಯೆಂದೆ ಶಾಖ ಸುಡುತ್ತದೆಂದು ಹೇಳಿದೆ
ಆದರೆ ಶಾಖವಿರುವುದು ಬೆಂಕಿಯಲ್ಲಲ್ಲ, ಅಂತರದಲ್ಲೆಂದು ತಿಳಿಯಲಿಲ್ಲ.
ಹಿಟ್ಟಿನ ಹುಂಜವ ಕೊಂದೆ ಹುಟ್ಟದೆ ಸತ್ತಿತೆಂದು ಹೇಳಿದೆ
ಹುಟ್ಟಿ ಸಾಯುವ ಜನರೆದುರು ಸತ್ತು ಹುಟ್ಟುವದ್ಹೇಗೆಂದು ತಿಳಿಯಲಿಲ್ಲ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.